ಮಾರ್ಚ್​​ 22ರಂದು ಶನಿವಾರ ಕರ್ನಾಟಕ ಬಂದ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಳಗಾವಿಯಲ್ಲಿ
ಮರಾಠಿ ಪುಂಡರ ದಬ್ಬಾಳಿಕೆ ವಿರುದ್ಧ ಕನ್ನಡ ಪರ ಸಂಘಟನೆಗಳು ಇದೇ ಮಾರ್ಚ್​​ 22ರಂದು ಶನಿವಾರ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ.
ಈ ಸಂಬಂಧ ಅಖಂಡ ಕರ್ನಾಟಕ ಬಂದ್‌
ಗೆ ಕುರಿತು ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸಭೆ ನಡೆದಿದ್ದು, ಸಭೆಯಲ್ಲಿ ಮಾರ್ಚ್ 22ರಂದು ಅಖಂಡ ಕರ್ನಾಟಕ ಬಂದ್​ ಮಾಡಲು ತೀರ್ಮಾನವಾಗಿದೆ.

ಜನಪರ ಹೋರಾಟಗಾರ ವಾಟಾಳ್ ನಾಗರಾಜ್ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮತನಾಡಿ, ಮಾರ್ಚ್ 22ರಂದು ಶನಿವಾರ ಬೆಳಗ್ಗೆ 6ರಿಂದ ಸಂಜೆ 6 ಗಂಟೆ ತನಕ ಕರ್ನಾಟಕ ರಾಜ್ಯ ಬಂದ್ ಆಗುವುದು ನಿಶ್ಚಿತ. ಬೆಳಗ್ಗೆ 10:30ಕ್ಕೆ ಟೌನ್ ಹಾಲ್‌ನಿಂದ ಫ್ರೀಡಂ ಪಾರ್ಕ್ ತನಕ ಪ್ರತಿಭಟನಾ ಮೆರವಣಿಗೆ ಮಾಡುತ್ತೇವೆ. ಹೀಗಾಗಿ ಸ್ವಾಭಿಮಾನಕ್ಕಾಗಿ ಯಾರು ವಾಹನ ಹತ್ತಬೇಡಿ ಎಂದು ವಾಟಾಳ್ ನಾಗರಾಜ್ ಅವರು ಸಾರ್ವಜನಿಕರಿಗೆ ಮನವಿ ಮಾಡಿದರು.
ಈಗಾಗಲೇ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಜೊತೆ ಮಾತಾನಾಡಿದ್ದೇವೆ. ಅವತ್ತು ಬಸ್ ಓಡಿಸಬಾರದೆಂದು ಹೇಳಿದ್ದೇವೆ. ಇನ್ನೂ ಒಂದು ಸಲ ಹೇಳುತ್ತೇವೆ ಅವತ್ತು ಬಸ್ ಓಡಿಸಬಾರದು. ಮಂತ್ರಿ
, ಸಿಎಂ ಕಾರಿನ ಚಾಲಕರೇ ಆಗಿರಲಿ, ಮಾನ ಮರ್ಯಾದೆ ಗೌರವ ಅಭಿಮಾನ ಸ್ವಾಭಿಮಾನಕ್ಕೆ ಅಂದು ಗಾಡಿ ಹತ್ತಬೇಡಿ ಎಂದು ಅವರು ಮನವಿ ಮಾಡಿದರು.

ಬೆಳಗಾವಿ ಘಟನೆ ಕಣ್ಣಿಗೆ ಚಿಕ್ಕದಾಗಿರಬಹುದು. ಆದ್ರೆ ನಮ್ ಕಣ್ಣಿಗೆ ಇದು ಬೆಟ್ಟ. ಕರ್ನಾಟಕದಲ್ಲಿ ಶಿವಾಜಿ ಪ್ರತಿಮೆ ಇದೆ. ಮಹಾರಾಷ್ಟ್ರದಲ್ಲಿ ನಮ್ಮ ಕನ್ನಡಿಗರ ಪ್ರತಿಮೆ ಇಲ್ಲ. ಕರ್ನಾಟಕದಲ್ಲಿ ತಮಿಳು, ತೆಲಗು, ಮಾರ್ವಾಡಿ, ಮಲೆಯಾಳಿಗರು ಬೇಕಾ? ಎಂದು ವಾಟಾಳ್ ಪ್ರಶ್ನಿಸಿದ ಅವರು ಬೆಳಗಾವಿಯಿಂದ ಎಂಇಎಸ್ ಅನ್ನು ಒದ್ದು ಓಡಿಸಬೇಕೋ ಬೇಡ್ವೋ? ಪ್ರಶ್ನಿಸಿದರು.
ರಾಜ್ಯಪಾಲರು ಜಂಟಿ ಅಧಿವೇಶನದಲ್ಲಿ ಹಿಂದಿಯಲ್ಲಿ ಭಾಷಣ ಮಾಡುತ್ತಾರೆ. ವಿಧಾನಸಭೆಯೊಳಗೆ ಯಾಕೆ ಯಾರು ಇದನ್ನು ವಿರೋಧ ಮಾಡಿಲ್ಲ. ಮೂಕ ಪ್ರೇಕ್ಷಕರಂತೆ ಮಾನ ಮರ್ಯಾದೆ ಇಲ್ಲದೇ ಶಾಸಕರು ಸುಮ್ಮನಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳು
, ದರೋಡೆಕೋರರು, ಕನ್ನಡ ಕಲಿಸಲ್ಲ ಅಂತ ನ್ಯಾಯಾಲಯಕ್ಕೆ ಹೋಗುತ್ತಾರೆ. ಬಸ್, ಆಟೋ, ಕಾರು, ಲಾರಿ ಚಾಲಕರಿಗೆ ಇದು ಸ್ವಾಭಿಮಾನ, ಮರ್ಯಾದೆ ಪ್ರಶ್ನೆಯಾಗಿದೆ ಎಂದು ವಾಟಾಳ್ ನಾಗರಾಜ್ ಹೇಳಿದರು.

ಬಂದ್​ಗೆ ಬೆಂಬಲ-
ಮಾರ್ಚ್​ 22ರಂದು ಕರೆ ನೀಡಿರುವ ಕರ್ನಾಟಕ ಬಂದ್​ಗೆ ಕೆಎಸ್ಆರ್ ಟಿಸಿ ಸಾರಿಗೆ ನೌಕರರ ಕೂಟ ಸಂಪೂರ್ಣ ಬೆಂಬಲಿಸಿದೆ. ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರು ಪ್ರತಿಕ್ರಿಯಿಸಿ
, ಬಂದ್​ಗೆ ಕೆಎಸ್ಆರ್ ಟಿಸಿ, ಬಿಎಂಟಿಸಿ ನೌಕರರ ಸಂಘದಿಂದ ಬೆಂಬಲ ಇದೆ. ಕಳೆದ ತಿಂಗಳು ಸಾರಿಗೆ ನೌಕರನ ಮೇಲೆ ಹಲ್ಲೆ ಮಾಡಿದ್ದಾರೆ. ಘಟನೆ ಖಂಡಿಸಿದ ಕನ್ನಡಪರ ಹೋರಾಟಗಾರರಿಗೆ ಸದಾ ಚಿರಋಣಿ. ಕೆಎಸ್​ಆರ್​ಟಿಸಿ, ಬಿಎಂಟಿಸಿ ನೌಕರರು ನಿಮ್ಮ ಜೊತೆ ಇದ್ದೇವೆ ಎಂದು ಅವರು ತಿಳಿಸಿ ಕರ್ನಾಟಕ ಬಂದ್​​ಗೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಸ್ಪಷ್ಟಪಡಿಸಿದರು.

ಶಿವರಾಮೇಗೌಡ ಬಣ ಬೆಂಬಲ-
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾರ್ಚ್​ 22ರಂದು ಕರ್ನಾಟಕ ಬಂದ್​ಗೆ ಕನ್ನಡ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣ ಬೆಂಬಲಿಸಿದೆ. ಈ ಬಗ್ಗೆ ಸ್ವತಃ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಶಿವರಾಮೇಗೌಡ ಸ್ಪಷ್ಟಪಡಿಸಿ ವಾಟಾಳ್​ ನಾಗರಾಜ್​ ನೇತೃತ್ವದಲ್ಲಿ ಬಂದ್​ಗೆ ಕರೆ ನೀಡಲಾಗಿದೆ. ನಾಡಿನ ಹಿತಕ್ಕಾಗಿ ಬಂದ್ ಮಾಡಲಾಗುತ್ತದೆ. ಸರ್ವ ಸಮಸ್ಯೆಗಳ ಪರಿಹಾರಕ್ಕೆ ಕರ್ನಾಟಕ ಬಂದ್​ಗೆ ಕರೆ ನೀಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಮೆಟ್ರೋದಲ್ಲಿ ಕನ್ನಡಿಗರಿಗೆ ಅನ್ಯಾಯ ಆಗುತ್ತಿದೆ. ಶಿವಸೇನೆ ನಿಷೇಧ ಸೇರಿ ಅನೇಕ ವಿಚಾರ ಮುಂದಿಟ್ಟು ಬಂದ್​ಗೆ ಕರೆ ನೀಡಲಾಗಿದೆ. ಚಾಲಕರು ಸೇರಿ ಎಲ್ಲರೂ ಬಂದ್​ ಯಶಸ್ವಿಗೊಳಿಸಬೇಕು. ಆಸ್ಪತ್ರೆ, ಮೆಡಿಕಲ್ ಸ್ಟೋರ್, ಹಾಲು ಸೇರಿ ಅಗತ್ಯ ಸೇವೆ ಹೊರತುಪಡಿಸಿ ಎಲ್ಲವೂ ಬಂದ್ ಆಗಲಿವೆ ಎಂದು ತಿಳಿಸಿದರು.

ಕಾರ್ಮಿಕ ಸಂಘಟನೆಯ ರವಿ ಬೈಂದೂರು ಮಾತನಾಡಿ ಹೋಟೆಲ್ ನವರು ಈ ಬಂದ್ ಗೆ ಬೆಂಬಲ ಕೊಡಬೇಕು. ಒಂದು ವೇಳೆ ಹೋಟೆಲ್ ನವರು ಬಂದ್ ಗೆ ಬೆಂಬಲ‌ಕೊಡಲಿಲ್ಲ ಅಂದರೆ ನಾವು ನಿಮ್ಮ ಹೋರಾಟಕ್ಕೆ ಕೈ ಜೋಡಿಸಲ್ಲ. ನಮಗೆ ನಿಮ್ಮ ನೈತಿಕ ಬೆಂಬಲ ಬೇಡ, ಪೂರ್ಣ ಬೆಂಬಲ ಬೇಕು ಎಂದಿದ್ದಾರೆ. ಹೋಟೆಲ್ ಮಾಲೀಕರ ಸಂಘ ಮಾತ್ರ ಇದುವರೆಗೂ ಯಾವುದೇ ತೀರ್ಮಾನ ಕೈಗೊಂಡಿಲ್ಲ.

 

- Advertisement -  - Advertisement - 
Share This Article
error: Content is protected !!
";