ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭಾರತದ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (DPIIT) ಪ್ರಕಟಿಸಿದ ಇತ್ತೀಚಿನ ದತ್ತಾಂಶದಂತೆ 2024-25ನೇ ಸಾಲಿನಲ್ಲಿ ಕರ್ನಾಟಕವು $6.62 ಶತಕೋಟಿ ಮೌಲ್ಯದ ವಿದೇಶಿ ನೇರ ಹೂಡಿಕೆಗಳನ್ನು ಆಕರ್ಷಿಸಿ, ದೇಶದ ಶ್ರೇಷ್ಠ FDI ತಾಣಗಳ ಪೈಕಿ ನಂಬರ್ 2 ಸ್ಥಾನದಲ್ಲಿದೆ.
ಈ ಮೈಲಿಗಲ್ಲು ಕೇವಲ ಸಂಖ್ಯೆಯಲ್ಲ – ಇದು ಭಾರತದ ಆರ್ಥಿಕ ಭವಿಷ್ಯವನ್ನು ರೂಪಿಸುವಲ್ಲಿ ಕರ್ನಾಟಕದ ಬೆಳೆಯುತ್ತಿರುವ ಪಾತ್ರವನ್ನು ಪ್ರತಿಬಿಂಬಿಸುತ್ತದೆ ಎಂದು ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.
ನಮ್ಮ ಸರಕಾರದ ಉದ್ಯಮಸ್ನೇಹಿ ನೀತಿಗಳು ಹಾಗೂ ಮೂಲ ಸೌಕರ್ಯದಲ್ಲಿ ಸಾಧಿಸಿದ ಗಣನೀಯ ಸುಧಾರಣೆಗಳು ವಿದೇಶಿ ನೇರಬಂಡವಾಳ ಹರಿದು ಬರಲು ಕಾರಣವಾಗಿದ್ದು, ಜಾಗತಿಕ ಹೂಡಿಕೆದಾರರಿಗೆ ಕರ್ನಾಟಕವು ಅಪ್ರತಿಮ ಆಕರ್ಷಣಾ ಕೇಂದ್ರವಾಗಿದೆ.
ಅರೆವಾಹಕ ತಂತ್ರಜ್ಞಾನದಿಂದ ಆರಂಭಿಸಿ ಏರೋಸ್ಪೇಸ್, ಎಲೆಕ್ಟ್ರಿಕ್ ವಾಹನಗಳು, ಬಯೋಟೆಕ್ ತನಕ — ಪ್ರತಿಯೊಂದು ಮುಂದಿನ ತಲೆಮಾರಿಗೆ ಸೇರಿದ ತಂತ್ರಜ್ಞಾನ ಕ್ಷೇತ್ರವೂ ಇಲ್ಲಿ ನೆಲೆಸುತ್ತಿವೆ. ಭಾರತದ ಜಾಗತಿಕ ಭವಿಷ್ಯವನ್ನು ರೂಪಿಸುವಲ್ಲಿ ಕರ್ನಾಟಕ ಒಂದು ನಿರ್ಣಾಯಕ ಶಕ್ತಿ ಕೇಂದ್ರ! ಎಂದು ಸಚಿವರು ತಿಳಿಸಿದರು.