ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ: ಜಾಗತಿಕ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಕ್ರಾಂತಿಯ ಹೊಸ ಶಕ್ತಿ ಕೇಂದ್ರ! ಎಂದು ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.
ಭಾರತದ ಪ್ರಮುಖ ಆರ್ಥಿಕತೆ ಕುರಿತು ದಿನಪತ್ರಿಕೆ ಆಯೋಜಿಸಿದ್ದ ‘ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಉತ್ಪಾದನಾ ಶೃಂಗಸಭೆ 2026’ ಉದ್ಘಾಟಿಸಿ ಕರ್ನಾಟಕದ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಉತ್ಪಾದನಾ ಕ್ಷೇತ್ರದ ಭವಿಷ್ಯದ ದೃಷ್ಟಿಕೋನವನ್ನು ಹಂಚಿಕೊಂಡೆ ಎಂದರು.
ಚಿಪ್ ವಿನ್ಯಾಸ (Chip Design) ಕ್ಷೇತ್ರದಲ್ಲಿ ಕರ್ನಾಟಕ ಈಗಾಗಲೇ ಜಾಗತಿಕ ಮಟ್ಟದಲ್ಲಿ ಬಲವಾದ ನಾಯಕತ್ವ ಸಾಧಿಸಿದೆ. ಇಂದಿಗೆ ಭಾರತದ ಒಟ್ಟು ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ಸುಮಾರು 10% ಕೊಡುಗೆ ಕರ್ನಾಟಕದ್ದು!
ಮುಂದಿನ ಹಂತದಲ್ಲಿ EMS, ಬಿಡಿಭಾಗಳು (Components) ಮತ್ತು PCB ಉತ್ಪಾದನೆ ಕ್ಷೇತ್ರಗಳಲ್ಲಿ ಉತ್ಪಾದನಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವುದು ನಮ್ಮ ಆದ್ಯತೆಯಾಗಿದೆ. ಇದರೊಂದಿಗೆ ಜಾಗತಿಕ ಎಲೆಕ್ಟ್ರಾನಿಕ್ಸ್ ಮೌಲ್ಯ ಸರಪಳಿಯಲ್ಲಿ ಕರ್ನಾಟಕದ ಪಾತ್ರವನ್ನು ಮತ್ತಷ್ಟು ಬಲಪಡಿಸಲು ಉದ್ದೇಶಿಸಿದ್ದೇವೆ ಎಂದು ಸಚಿವರು ಹೇಳಿದರು.
ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್‌ಗಳು ಸಾಮಾನ್ಯ ಉದ್ಯಮವಲ್ಲ – ಅವು ಆಧುನಿಕ ಆರ್ಥಿಕ ವ್ಯವಸ್ಥೆಯ ಅಡಿಪಾಯ.
ಬಲವಾದ ಕೈಗಾರಿಕಾ ಕ್ಲಸ್ಟರ್‌ಗಳು, ಪರಿಣಿತ ಮಾನವ ಸಂಪನ್ಮೂಲ ಮತ್ತು ಉದ್ಯಮಸ್ನೇಹಿ ನೀತಿಗಳ ಮೂಲಕ ಹೂಡಿಕೆ, ನವೋತ್ಪಾದನೆ ಹಾಗೂ ದೊಡ್ಡ ಪ್ರಮಾಣದ ಉದ್ಯೋಗ ಸೃಷ್ಟಿಗೆ ಸೂಕ್ತ ಪರಿಸರವನ್ನು ನಾವು ನಿರ್ಮಿಸುತ್ತಿದ್ದೇವೆ ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.
ನಮ್ಮ ನೀತಿಗಳ ಸ್ಪಷ್ಟತೆಯು ಹೂಡಿಕೆದಾರರಲ್ಲಿ ವಿಶ್ವಾಸ ಮೂಡಿಸುತ್ತಿದೆ. ಆದ್ದರಿಂದ ಪ್ರೋತ್ಸಾಹಕ ಪ್ಯಾಕೇಜುಗಳು, ವೇಗವಾದ ಅನುಮೋದನೆ ಪ್ರಕ್ರಿಯೆಗಳು ಮತ್ತು ಉದ್ಯಮ-ವಿದ್ಯಾಸಂಸ್ಥೆಗಳ ಸಹಕಾರದ ಮೂಲಕ ಪ್ರತಿಭೆ ಅಭಿವೃದ್ಧಿಗೆ ಒತ್ತು ನೀಡುತ್ತಾ, ಅನುಮೋದನೆಯಿಂದ ಉತ್ಪಾದನೆವರೆಗೆ ಯೋಜನೆಗಳು ವೇಗವಾಗಿ ಮತ್ತು ನಿರೀಕ್ಷಿತವಾಗಿ ಸಾಗುವಂತೆ ಮಾಡುತ್ತಿದ್ದೇವೆ.
ಕರ್ನಾಟಕವು ಕೇವಲ ಕಾರ್ಖಾನೆಗಳನ್ನು ನಿರ್ಮಿಸುತ್ತಿಲ್ಲ – ನಾವು ನಾವೀನ್ಯತೆ, ಉತ್ಪಾದನೆ ಮತ್ತು ಪೂರೈಕೆ ಸರಪಳಿಗಳು ಒಟ್ಟಾಗಿ ಬೆಳೆಯುವಂತಹ ಪರಿಸರ ವ್ಯವಸ್ಥೆಯನ್ನು (ecosystem) ನಿರ್ಮಿಸುತ್ತಿದ್ದೇವೆ.
ಭಾರತದ ಎಲೆಕ್ಟ್ರಾನಿಕ್ಸ್ ಭವಿಷ್ಯವನ್ನು ರೂಪಿಸುತ್ತಿರುವ ನಾಯಕರನ್ನು ಒಂದೇ ವೇದಿಕೆಗೆ ಕರೆತಂದ ಕಾರ್ಯ ಶ್ಲಾಘನೀಯ ಎಂದು ಸಚಿವ ಎಂ.ಬಿ ಪಾಟೀಲ್ ಮೆಚ್ಚುಗೆ ವ್ಯಕ್ತಪಡಿಸಿದರು.

