ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜಪಾನ್ ದೇಶದ ಬೆಂಗಳೂರಿನ ಕಾನ್ಸೊಲ್ ಜನರಲ್ ಶ್ರೀ ನಕಾನೆ ಟ್ಸುಟೊಮು (Nakane Tsutomu) ಅವರನ್ನು ಭೇಟಿಯಾಗುವುದು ಸದಾ ಸಂತೋಷದಾಯಕ. ಜಪಾನಿನ ಪ್ರಮುಖ ಕಂಪನಿಗಳಿಗೆ ಕರ್ನಾಟಕವು ಎರಡನೇ ಮನೆಯಾಗಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.
ಇಂದಿನ ನಮ್ಮ ಚರ್ಚೆಗಳು ಕರ್ನಾಟಕ – ಜಪಾನ್ ನ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವುದು, ನವೀನತೆಗೆ ಉತ್ತೇಜನ ನೀಡುವುದು ಮತ್ತು ಹೊಸ ಅವಕಾಶಗಳನ್ನು ಅನಾವರಣಗೊಳಿಸುವುದರ ಮೇಲೆ ಕೇಂದ್ರೀಕೃತವಾಗಿದ್ದವು ಎಂದು ಸಚಿವರು ತಿಳಿಸಿದರು.

