ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
R&D ಯಿಂದ ಉತ್ಪಾದನೆವರೆಗೆ ಎಪಿರಾಕ್ ಹೂಡಿಕೆ ಮಾಡಲಿದ್ದು ಕರ್ನಾಟಕದ ಪ್ರೋತ್ಸಾಹ ದೊರೆಯಲಿದೆ ಎಂದು ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ಭರವಸೆ ನೀಡಿದರು.
ಎಪಿರಾಕ್ ಸ್ವೀಡನ್ ಮೂಲದ ಗಣಿಗಾರಿಕೆ ಮತ್ತು ಮೂಲಸೌಕರ್ಯ ಕ್ಷೇತ್ರಗಳಿಗೆ ವಿಶ್ವದರ್ಜೆಯ ಉಪಕರಣಗಳನ್ನು ಪೂರೈಸುವ ಪ್ರಮುಖ ಕಂಪನಿಯಾಗಿದೆ. ಎಪಿರಾಕ್ ಸಂಸ್ಥೆಯ ಭಾರತದ ಕಾರ್ಯಾಚರಣೆಗಳ ಮುಖ್ಯಸ್ಥರಾದ ಅರುಣ್ ಕುಮಾರ್ ಅವರನ್ನು ಸ್ಟಾಕ್ ಹೋಂನಲ್ಲಿ ಭೇಟಿಯಾಗಿ, ಕರ್ನಾಟಕದಲ್ಲಿನ ಭವಿಷ್ಯದ ಹೂಡಿಕೆ ಅವಕಾಶಗಳ ಕುರಿತು ಚರ್ಚಿಸಲಾಯಿತು.
ಅವರು ತಮ್ಮ ಸಂಸ್ಥೆಯ ದೃಷ್ಟಿ ಕೋನ ಮತ್ತು ವಿಸ್ತರಣಾ ಯೋಜನೆಯನ್ನು ಹಂಚಿಕೊಂಡರು. ಭಾರತವನ್ನು ಪ್ರಮುಖ ಬೆಳವಣಿಗೆಯ ಮಾರುಕಟ್ಟೆ ಎಂದು ಗುರುತಿಸಿದ್ದಲ್ಲದೆ, ತಮ್ಮ ಮುಂಬರುವ ಹೂಡಿಕೆಗಳಿಗೆ ಕರ್ನಾಟಕವನ್ನು ಸಂಭಾವ್ಯ ಕೇಂದ್ರವಾಗಿ ಪರಿಗಣಿಸಿದ್ದಾರೆ ಎಂದು ಸಚಿವರು ತಿಳಿಸಿದರು.
Epiroc ಪ್ರಸ್ತುತ ಬೆಂಗಳೂರಿನಲ್ಲಿ ಪ್ರಮುಖ R&D ಕೇಂದ್ರವನ್ನು ನಡೆಸುತ್ತಿದೆ. ಇಲ್ಲಿ 500ಕ್ಕೂ ಹೆಚ್ಚು ಉದ್ಯೋಗಿಗಳು ಕಾರ್ಯ ನಿರ್ಹಿಸುತ್ತಿದ್ದು, ಸಂಸ್ಥೆಯ ಜಾಗತಿಕ R&D ಚಟುವಟಿಕೆಗಳಲ್ಲಿ 25% ಕೊಡುಗೆ ನೀಡುತ್ತಿದ್ದಾರೆ. ಕಂಪನಿಯು ಈ ವರ್ಷ 500 ಕೋಟಿ ಮತ್ತು 2030ರ ವೇಳೆಗೆ 1,000 ಕೋಟಿ ಬಂಡವಾಳ ಹೂಡಿಕೆ ಯೋಜನೆ ರೂಪಿಸಿದೆ ಎಂದರು.
ನಾವು Epirocಗೆ ಕರ್ನಾಟಕದಲ್ಲಿ ತಮ್ಮ R&D ಸೌಲಭ್ಯಗಳನ್ನು ಮತ್ತಷ್ಟು ವಿಸ್ತರಿಸಿ, ತಯಾರಿಕಾ ಘಟಕಗಳನ್ನು ಸ್ಥಾಪಿಸುವಂತೆ ಪ್ರೋತ್ಸಾಹಿಸಿದೆವು. ಇಂತಹ ಹೂಡಿಕೆಗಳು ರಾಜ್ಯದ ಕೈಗಾರಿಕಾ ವಿಕಾಸಕ್ಕೆ ಹೊಸ ಚೈತನ್ಯವನ್ನು ತರುವುದರ ಜೊತೆಗೆ, ತಾಂತ್ರಿಕ ಮುನ್ನಡೆಗೆ ಮತ್ತಷ್ಟು ಶಕ್ತಿ ದೊರೆಯಲಿದೆ ಎಂದು ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ಅಭಿಪ್ರಾಯಪಟ್ಟರು.