ದಾವೋಸ್‌ ನತ್ತ ಕರ್ನಾಟಕದ ಪಯಣ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜಿಐಎಂ-2025 11 ತಿಂಗಳಲ್ಲಿ ಶೇ.46ರಷ್ಟು ಸಾಕಾರಗೊಂಡು ದಾವೋಸ್ ನತ್ತ ಪಯಣ! ಮಾಡಲಾಗಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.

ಒಡಂಬಡಿಕೆ ಕೇವಲ ಕಾಗದದಲ್ಲಿಲ್ಲ- ಕಾರ್ಯರೂಪದಲ್ಲಿ ಸಾಗುತ್ತಿದೆ! 11 ತಿಂಗಳಲ್ಲಿ 4.71 ಲಕ್ಷ ಕೋಟಿ ನೈಜ ಹೂಡಿಕೆ. ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಪಡೆದ ಭರವಸೆಗಳು ಇಂದು ಕರ್ನಾಟಕದ ನೆಲದಲ್ಲಿ ಉದ್ಯೋಗ, ಕೈಗಾರಿಕೆ ಮತ್ತು ಆರ್ಥಿಕ ಶಕ್ತಿಯಾಗಿ ರೂಪುಗೊಳ್ಳುತ್ತಿವೆ ಎಂದು ಸಚಿವರು ತಿಳಿಸಿದ್ದಾರೆ.

- Advertisement - 

ಏಕಗವಾಕ್ಷಿ ಡಿಜಿಟಲ್ ವ್ಯವಸ್ಥೆ, ತ್ವರಿತ ಅನುಮೋದನೆಗಳು ಹಾಗೂ ಕೈಗಾರಿಕಾಸ್ನೇಹಿ ನೀತಿಗಳ ಫಲವಾಗಿ ತಯಾರಿಕಾ, ಸೆಮಿಕಂಡಕ್ಟರ್, ಮರುಬಳಕೆ ಇಂಧನ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ದಾಖಲೆಯ ಪ್ರಗತಿ ಸಾಧ್ಯವಾಗಿದೆ.

ದಾವೋಸ್‌ನತ್ತ ನಮ್ಮ ಪಯಣ:
ಜಾಗತಿಕ ಹೂಡಿಕೆಯನ್ನು ಮತ್ತಷ್ಟು ಆಕರ್ಷಿಸಲು ನಾವು ಸಜ್ಜಾಗಿದ್ದೇವೆ. ಜನವರಿ
19ರಿಂದ 23ರವರೆಗೆ ದಾವೋಸ್‌ನಲ್ಲಿ ನಡೆಯಲಿರುವ ಜಾಗತಿಕ ಆರ್ಥಿಕ ಶೃಂಗಸಭೆಯಲ್ಲಿ (WEF) ನಾವು ಪಾಲ್ಗೊಳ್ಳುತ್ತಿದ್ದೇವೆ. ವಿಶ್ವದ ಪ್ರಮುಖ ಉದ್ಯಮಿಗಳನ್ನು ಕರ್ನಾಟಕಕ್ಕೆ ಆಹ್ವಾನಿಸುವ ಮೂಲಕ ಮತ್ತಷ್ಟು ಬಂಡವಾಳ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಯೇ ನಮ್ಮ ಗುರಿ. ಕರ್ನಾಟಕದ ಅಭಿವೃದ್ಧಿ ಪಥದಲ್ಲಿ ಇದು ಮಹತ್ವದ ಹೆಜ್ಜೆ! ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.

- Advertisement - 

 

Share This Article
error: Content is protected !!
";