ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೇಸಿಗೆಯ ಸಮಯದಲ್ಲಿ ಬೆಂಗಳೂರಿನ ಹಲವು ಭಾಗದಲ್ಲಿ ನೀರಿನ ಸಮಸ್ಯೆ ಎದುರಾಗುತ್ತದೆ.
ನೀರಿನ ಟ್ಯಾಂಕರ್ ಮಾಫಿಯಾದಿಂದ ಸಾರ್ವಜನಿಕರಿಗಾಗುವ ಸಮಸ್ಯೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಶಾಶ್ವತ ಪರಿಹಾರ ನೀಡುತ್ತಿದೆ ಎಂದು ಕಾಂಗ್ರೆಸ್ ತಿಳಿಸಿದೆ.
ಬೆಂಗಳೂರು ಜಲಮಂಡಳಿ ಇದೀಗ ಆ್ಯಪ್ ಮೂಲಕ ಮನೆ ಬಾಗಿಲಿಗೆ ಕಾವೇರಿ ನೀರನ್ನು ವಿತರಿಸುವ ಯೋಜನೆ ರೂಪಿಸಿದೆ ಎಂದು ಕಾಂಗ್ರೆಸ್ ಮೆಚ್ಚುಗೆ ವ್ಯಕ್ತಪಡಿಸಿದೆ.