ಕೆ.ಸಿ.ವೀರೇಂದ್ರ ಪಪ್ಪಿಯ ಅಪಾರ ಪ್ರಮಾಣದ ಆಸ್ತಿ ಪತ್ರ, ಕೋಟ್ಯಂತರ ನಗದ ವಶ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಿತ್ರದುರ್ಗ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮನೆ, ಕಚೇರಿ ಮೇಲೆ ಇಡಿ ಅಧಿಕಾರಿಗಳ ದಾಳಿ ಮಾಡಿ ಅಕ್ರಮ ಆಸ್ತಿ ಪರಿಶೀಲನಾ ಕಾರ್ಯ ಶನಿವಾರ ಮುಂದುವರೆದು ಮಧ್ಯಾಹ್ನದ ವೇಳೆ ಅಂತ್ಯವಾಗಿದೆ.

ಶಾಸಕ ವೀರೇಂದ್ರ ಪಪ್ಪಿ ಅವರ ಕೋಟಿ ಕೋಟಿ ನಗದು, ಕೋಟ್ಯಂತರ ರೂ. ಮೌಲ್ಯದ ಆಸ್ತಿ ದಾಖಲೆ, ಚಿನ್ನಾಭರಣ, ಬೆಳ್ಳಿ, ಐಷರಾಮಿ ಕಾರುಗಳು ಸೇರಿದಂತೆ ಆಸ್ತಿ ಕಂಡು ಇಡಿ ಅಧಿಕಾರಿಗಳೇ ಬೆಚ್ಚಿ ಬಿದ್ದ ಪ್ರಸಂಗ ಕೂಡಾ ನಡೆಯಿತು.
ಮನೆ, ಕಚೇರಿಯಲ್ಲಿ ಎಲ್ಲ ಆಸ್ತಿ ದಾಖಲಾತಿಗಳನ್ನು ಇಡಿ ಅಧಿಕಾರಿಗಳು ಜೆರಾಕ್ಸ್ ಮಾಡಿಕೊಂಡು ಹೊರಟ ಹೋಗಿದ್ದಾರೆ.

- Advertisement - 

ಆನ್ಲೈನ್ ಗೇಮಿಂಗ್, ಅಕ್ರಮ ಹಣ ವರ್ಗಾವಣೆ ಹಿನ್ನೆಲೆಯಲ್ಲೇ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ಸಹೋದರರಾದ ಕೆ.ಸಿ.ನಾಗರಾಜ್ ಹಾಗೂ ಕೆ.ಸಿ. ತಿಪ್ಪೇಸ್ವಾಮಿ ಮನೆಯಲ್ಲೂ ನಿರಂತರ 19 ಗಂಟೆಗಳ ಕಾಲ ಇಡಿ ಅಧಿಕಾರಿಗಳ ತಂಡ ಶೋಧ ಕಾರ್ಯ ನಡೆಸಿತು.


ಇಡಿ  ಡೆಪ್ಯುಟಿ ಡೈರೆಕ್ಟರ್ ನೇತೃತ್ವದಲ್ಲಿ ಬೆಂಗಳೂರಿಂದ ಆಗಮಿಸಿದ್ದ ತಂಡವು ಅಪಾರ ಮೌಲ್ಯದ ಆಸ್ತಿಪಾಸ್ತಿ ದಾಖಲೆ ಕೊಂಡೊಯ್ದಿದಿದ್ದಾರೆ.

- Advertisement - 

ಇಡಿ ಅಧಿಕಾರಿಗಳ ದಾಳಿ ಕುರಿತು ಕೆ‌.ಸಿ ನಾಗರಾಜ್ ಪ್ರತಿಕ್ರಿಯೆಸಿ ಯಾವುದೇ ನೋಟಿಸ್ ನಮಗೆ ನೀಡಲ್ಲ. ಇಡಿ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡಿದ್ದೇವೆ. ಎಲ್ಲಾ ದಾಖಲೆ ಪರಿಶೀಲನೆ ಮಾಡಿದ್ದಾರೆ. ಶಾಸಕ ವೀರೇಂದ್ರ ಪಪ್ಪಿ ಬಂಧನದ ಕುರಿತು ನಮಗೆ ಮಾಹಿತಿ ಇಲ್ಲ. ಶಾಸಕ ವೀರೇಂದ್ರ ಪಪ್ಪಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಮೂರು ಮನೆಗಳ ಮೇಲೆ ನಡೆದಿದ್ದ ಇಡಿ ರೇಡ್ ಅಂತ್ಯವಾಗಿದೆ ಸಹೋದರ ಕೆ.ಸಿ.ನಾಗರಾಜ್ ಸ್ಪಷ್ಟನೆ ನೀಡಿದ್ದಾರೆ.

 

 

 

Share This Article
error: Content is protected !!
";