ಇಂದು ಅಗಲಿದ ಪತ್ರಕರ್ತರಿಗೆ ಕೆಯುಡಬ್ಲೂಜೆ ಶ್ರದ್ದಾಂಜಲಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಇತ್ತೀಚೆಗೆ ನಮ್ಮನ್ನಗಲಿದ ಹಿರಿಯ ಪತ್ರಕರ್ತರಾದ ಎಸ್.ಕೆ.ಶ್ಯಾಮಸುಂದರ್ ಮತ್ತು ಶ್ರವಣಬೆಳಗೊಳದ ಎಸ್.ಎನ್.ಅಶೋಕಕುಮಾರ್ ಅವರಿಗೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ನುಡಿ ನಮನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ನಗರದ ಕೆ.ಜಿ.ರಸ್ತೆ ಕಂದಾಯ ಭವನದ 3ನೇ ಮಹಡಿಯಲ್ಲಿ ಕೆಯುಡಬ್ಲೂೃಜೆ ಸಭಾಂಗಣದಲ್ಲಿ ಏ.29ರಂದು ಮಂಗಳವಾರ ಬೆಳಿಗ್ಗೆ 11.30ಕ್ಕೆ ಏರ್ಪಡಿಸಲಾಗಿದೆ.
ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಕನ್ನಡಪ್ರಭ ಪತ್ರಿಕೆ ಸಂಪಾದಕರಾದ ರವಿ ಹೆಗಡೆ, ಪುರವಣಿ ಸಂಪಾದಕರಾದ ಜೋಗಿ, ಪ್ರಜಾವಾಣಿ ನಿವೃತ್ತ ಸಂಪಾದಕರಾದ ಪದ್ಮರಾಜ ದಂಡವತಿ ಅವರು ಭಾಗವಹಿಸಲಿದ್ದು, ಕೆಯುಡಬ್ಲೂಜೆ ಅಧ್ಯಕ್ಷರಾದ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಇತ್ತೀಚೆಗೆ ಅಗಲಿದ ಪತ್ರಕರ್ತರುಗಳಿಗೂ ಮತ್ತು ಕಾಶ್ಮೀರದ ಪಹಲ್ಗಾಮ ಘಟನೆಯಲ್ಲಿ ಮಡಿದವರಿಗೂ ಶ್ರದ್ಧಾಂಜಲಿ ಸಲ್ಲಿಸಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

Share This Article
error: Content is protected !!
";