ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ಕೆಯುಡಬ್ಲೂಜೆ ದತ್ತಿನಿಧಿ ಮೊತ್ತ 2 ಲಕ್ಷಕ್ಕೆ ಏರಿಕೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘವು ಸ್ಥಾಪಿಸಿರುವ ಕೆಯುಡಬ್ಲೂಜೆ ಪ್ರಶಸ್ತಿ ಮೊತ್ತ 2 ಲಕ್ಷ ರೂಗೆ ಏರಿಕೆ ಆಗಿದೆ.
ಎರಡು ವರ್ಷದ ಹಿಂದೆ ಅಕಾಡೆಮಿಗೆ 1.50 ಲಕ್ಷ ರೂ ಚೆಕ್ ಮೂಲಕ ಹಣ ಪಾವತಿ ಮಾಡುವ ಮೂಲಕ ಕೆಯುಡಬ್ಲೂಜೆ ಪ್ರಶಸ್ತಿ ಸ್ಥಾಪಿಸಿತ್ತು. ಅದರ ಮುಂದುವರಿದ ಭಾಗವಾಗಿ 50 ಸಾವಿರ ಚೆಕ್ನ್ನು ಅಕಾಡೆಮಿಯ ಅಧ್ಯಕ್ಷೆ ಆಯೇಷಾ ಖಾನಂ ಮತ್ತು ಕಾರ್ಯದರ್ಶಿ ಸಹನ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹಸ್ತಾಂತರಿಸಿದರು.

  ಸಂದರ್ಭದಲ್ಲಿ ಕೆಯುಡಬ್ಲೂಜೆ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಖಜಾಂಚಿ ವಾಸುದೇವ ಹೊಳ್ಳ, ಅಕಾಡೆಮಿಯ ಮುನಿರಾಜ್ ಅವರು ಹಾಜರಿದ್ದರು.
ಕೆಯುಡಬ್ಲೂಜೆ ಹೋರಾಟದ ಲವಾಗಿ ರಾಜ್ಯದಲ್ಲಿ 1982ರಲ್ಲಿ ಪತ್ರಿಕಾ ಅಕಾಡೆಮಿಯನ್ನು ರಾಜ್ಯ ಸರ್ಕಾರ ಪ್ರಾರಂಭಿಸಿತ್ತು. ನಾಲ್ಕು ದಶಕಗಳ ಇತಿಹಾಸ ಹೊಂದಿರುವ ಅಕಾಡೆಮಿಯು, ಕರ್ನಾಟಕ ಮಾಧ್ಯಮ ಅಕಾಡೆಮಿಯಾಗಿ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿದೆ.

ಕೆಯುಡಬ್ಲೂಜೆ ಮತ್ತು ಮಾಧ್ಯಮ ಅಕಾಡೆಮಿಯ ನಡುವೆ ಸೌಹಾರ್ದಯುತ ಸಂಬಂಧ ಇನ್ನಷ್ಟು ಗಟ್ಟಿಯಾಗಿ ಮುಂದುವರಿಯಲಿ ಎನ್ನುವ ಸದಾಶಯದೊಂದಿಗೆ ಕೆಯುಡಬ್ಲೂಜೆ ದತ್ತಿ ಪ್ರಶಸ್ತಿ ಸ್ಥಾಪಿಸಲಾಗಿದೆ. ಪ್ರತಿ ವರ್ಷವೂ ಮಾಧ್ಯಮ ಅಕಾಡೆಮಿಯಲ್ಲಿ ಕೆಯುಡಬ್ಲೂಜೆ ದತ್ತಿ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತರೊಬ್ಬರಿಗೆ ಪ್ರಶಸ್ತಿ ಪ್ರದಾನ ಮಾಡಲಿ ಎನ್ನುವ ಆಶಯ ನಮ್ಮದ್ದಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಪ್ರತಿಕ್ರಿಯಿಸಿದ್ದಾರೆ.

 

- Advertisement -  - Advertisement - 
Share This Article
error: Content is protected !!
";