ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಶ್ರೀಗಳ ಆಶೀರ್ವಾದ – ಮಾರ್ಗದರ್ಶನಕ್ಕೆ ಚಿರಋಣಿ ಆಗಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.
ಬೆಂಗಳೂರು ನಿರ್ಮಾತೃ ನಾಡಪ್ರಭು ಶ್ರೀ ಕೆಂಪೇಗೌಡರ ಗೌರವ ಸ್ಮರಣೆಗೆ ನಮ್ಮ ಸರ್ಕಾರ ಬೆಂಗಳೂರಿನ ಮಾಗಡಿ ರಸ್ತೆಯ ಸುಮನಹಳ್ಳಿ ಬಳಿ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ 5 ಎಕರೆ ಜಾಗ ನೀಡಿ, ಅಲ್ಲಿ ಕೆಂಪೇಗೌಡ ಭವನ ನಿರ್ಮಿಸಲಾಗುತ್ತಿದೆ. ಇದರ ಭೂಮಿ ಪೂಜೆ ಕಳೆದ ಜೂನ್ 27 ರಂದು ಶಾಸ್ತ್ರಬದ್ಧವಾಗಿ ನಡೆದಿತ್ತು ಎಂದು ಡಿಸಿಎಂ ಅವರು ತಿಳಿಸಿದ್ದಾರೆ.
ಶ್ರೀ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅವರು ವಾಸ್ತುಶಿಲ್ಪಿ ದಿನೇಶ್ ವರ್ಮಾ ಅವರೊಂದಿಗೆ ಬುಧವಾರ ಸ್ಥಳಕ್ಕೆ ತೆರಳಿ, ಅಗತ್ಯ ಸೂಚನೆ ಸಲಹೆಗಳನ್ನು ನೀಡಿದ್ದು ಸಂತಸ ತಂದಿದೆ.
ಶ್ರೀಗಳ ಆಶೀರ್ವಾದ ಮತ್ತು ಮಾರ್ಗದರ್ಶನದೊಂದಿಗೆ ನಾವು ನಿರ್ಮಿಸುವ ಕೆಂಪೇಗೌಡ ಭವನವು ನಾಡಿಗೆ ಮಾದರಿ, ಹೆಮ್ಮೆಯ ಪ್ರತೀಕ ಆಗಲಿದೆ ಎಂದು ಡಿ.ಕೆ ಶಿವಕುಮಾರ್ ಅಭಿಪ್ರಾಯಪಟ್ಟರು.

