ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೆಂಪೇಗೌಡ ಯುವಶಕ್ತಿ ವೇದಿಕೆ ಹಾಗೂ ಮಹಿಳಾ ಘಟಕ ಹರಿಯಬ್ಬೆ ಕಾರ್ಯಕಾರಿಣಿ ಸದಸ್ಯರಗಳು ಕಳೆದ ನಾಲ್ಕೈದು ವರ್ಷಗಳಿಂದ ಹರಿಯಬ್ಬೆ ಗ್ರಾಮದಲ್ಲಿ ನಾಡಪ್ರಭು ಕೆಂಪೇಗೌಡ ಸಂಘವನ್ನು ರಚನಾತ್ಮಕವಾಗಿ ಕಾರ್ಯನಿರ್ವಹಿಸಿಕೊಂಡು ಬಂದಿದ್ದಾರೆ.
ಈ ಹಿನ್ನೆಲೆ ಕೆಂಪೇಗೌಡ ಯುವಶಕ್ತಿ ವೇದಿಕೆಯ ಪದಾಧಿಕಾರಿಗಳು ಹರಿಯಬ್ಬೆ ಗ್ರಾಮದಲ್ಲಿ ನಾಡಪ್ರಭು ಕೆಂಪೇಗೌಡ ಪುತ್ಥಳಿ ನಿರ್ಮಾಣ ಮಾಡುವ ಉದ್ದೇಶದಿಂದ ಕಳೆದ ನಾಲ್ಕೈದು ವರ್ಷಗಳಿಂದ ಸಂಘಟಿತರಾಗಿ ಸಂಘದ ಶಕ್ತಿ ಅನುಸಾರ ಸಮಾಜಮುಖಿ ಕಾರ್ಯಗಳಲ್ಲಿ ಸಹ ತೊಡಗಿಕೊಂಡು ಬಂದಿರುವ ಕೆಂಪೇಗೌಡ ಯುವಶಕ್ತಿ ವೇದಿಕೆ ಹರಿಯಬ್ಬೆ ಸಂಘದ ಕಾರ್ಯಕಾರಿಣಿಯ ಪದಾಧಿಕಾರಿಗಳು ಅಂತಿಮ ಘಟ್ಟವಾದ ಕೆಂಪೇಗೌಡ ಪುತ್ಥಳಿಯನ್ನು ಹರಿಯಬ್ಬೆಯ ಪ್ರಮುಖ ಜಾಗದಲ್ಲಿ ಪ್ರತಿಷ್ಠಾಪನೆ ಮಾಡುವುದಾಗಿ ಕೆಂಪೇಗೌಡ ಯುವಶಕ್ತಿ ವೇದಿಕೆ ಸಂಘದ ಪದಾಧಿಕಾರಿಗಳು ವ್ಯಕ್ತಪಡಿಸಿರುತ್ತಾರೆ.
ಈಗಾಗಲೇ ಪುತ್ಥಳಿ ಮಾಡಿಸುವ ವಿಷಯವಾಗಿ ಕಮಿಟಿ ಸದಸ್ಯರು ಸೂರ್ಯ ಶಿಲ್ಪ ಕಲಾ ಸ್ಟುಡಿಯೋ ಗೆ ಮುಂಗಡ ನೀಡಿ ಬಂದಿದ್ದಾರೆ.
ಕೆಂಪೇಗೌಡ ಯುವಶಕ್ತಿ ವೇದಿಕೆ ಹರಿಯಬ್ಬೆ ಗೌರವಾಧ್ಯಕ್ಷ ಸಿ.ಎಸ್. ಮಹಾಂತೇಶ, ಅಧ್ಯಕ್ಷ ಹೆಚ್.ಪಿ ನವೀನ್ ಕುಮಾರ್, ಉಪಾಧ್ಯಕ್ಷರಾದ ಜಿ.ಸಿ ಕಾಂತರಾಜು ಮತ್ತು ಅಶ್ವತ್ ನಾರಾಯಣ್ ಹಾಗೂ ಜೆ. ಶಶಿಧರ್, ಕಾರ್ಯದರ್ಶಿ ಆರ್.ಹನುಮಂತರಾಯ, ಸಹ ಕಾರ್ಯದರ್ಶಿ ಹೆಚ್.ಜೆ ಜ್ಞಾನಪ್ರಸಾದ್, ಸಂಘಟನಾ ಕಾರ್ಯದರ್ಶಿ ಹೆಚ್.ಡಿ ಹನುಮಂತರಾಯ, ಖಜಾಂಚಿ ಆರ್. ದಯಾನಂದ್, ನಿರ್ದೇಶಕರುಗಳಾದ ಹೆಚ್.ಸಿ ನಾಗರಾಜ್, ಕೆ.ಜಿ ಸುರೇಶ್, ಟಿ. ತಿಪ್ಪೇಸ್ವಾಮಿ, ಹೆಚ್.ಹನುಮಂತರಾಯ, ಸಿ.ವೆಂಕಟೇಶ್,
ಬಿ.ಡಿ ಸತೀಶ್, ವಿ. ಶ್ರೀನಿವಾಸ್, ಹೆಚ್.ಸತೀಶ್ ಕುಮಾರ್, ಗುಂಡೇಗೌಡ, ಕೆಂಪೇಗೌಡ ಯುವಶಕ್ತಿ ವೇದಿಕೆ ಹರಿಯಬ್ಬೆ ಮಹಿಳಾ ಘಟಕ ಗೌರವಾಧ್ಯಕ್ಷೆ ಅರುಣಾ ಪಟೇಲ್, ಅಧ್ಯಕ್ಷೆ ವನಿತಾ ಮಂಜುನಾಥ್, ಉಪಾಧ್ಯಕ್ಷರಾದ ಶಾರದಮ್ಮ ವೆಂಕಟೇಶಪ್ಪ, ಎನ್. ಪುಟ್ಟರಂಗಮ್ಮ ಕರಿಯಣ್ಣ, ಮತ್ತು ಆರ್.ವಸಂತ ಲಕ್ಷ್ಮಿ ಮಂಜುನಾಥ್, ಕಾರ್ಯದರ್ಶಿ ಎಸ್.ಪಿ ಲಕ್ಷ್ಮೀದೇವಿ ಗೋವಿಂದಪ್ಪ, ಸಹ ಕಾರ್ಯದರ್ಶಿ ಈ. ರಾಜಮ್ಮ ಕರಿಯಣ್ಣ, ಖಜಾಂಚಿ ಟಿ.ಸ್ವರೂಪರಾಣಿ ದಯಾನಂದ್, ಸಂಘದ ನಿರ್ದೇಶಕರುಗಳಾದ ಟಿ.ಅನಿತಾ ಮಹಾಲಿಂಗಪ್ಪ, ಕೆ.ರೂಪ ಗೋವಿಂದರಾಜು,
ಕಮಲಾಕ್ಷಿ ಶಿವಣ್ಣ, ಎಲ್.ಗಾಯಿತ್ರಿ ನರೇಂದ್ರ, ಟಿ.ಮಣಿ ಗುಣಯ್ಯ, ಜೆ.ಲಕ್ಷ್ಮೀದೇವಿ ಪ್ರಕಾಶ್, ಜಿ.ನೀಲಮ್ಮ ಧನಂಜಯ್, ಜಯಲಕ್ಷ್ಮಿ ಗಂಗಾಧರ್, ಅನ್ಷ್ ಗುಂಡೇಗೌಡ, ಆರ್.ನಂದಿನಿ ನಾಗೇಂದ್ರ, ಎನ್.ಸವಿತಾ ಧನಂಜಯ್, ಲಿಲತಾ ಹನುಮಂತರಾಯ ಸಂಘದ ಸದಸ್ಯರು ಒಳಗೊಂಡಂತೆ ಸಂಘ ರಚನೆಯಾಗಿದೆ. ನಾಡಪ್ರಭು ಕೆಂಪೇಗೌಡ ಪುತ್ಥಳಿಯನ್ನು ಮುಂದಿನ ಎರಡು ಮೂರು ತಿಂಗಳ ಒಳಗಾಗಿಯೇ ಗ್ರಾಮದ ನಿರ್ದಿಷ್ಟ ಜಾಗದಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ನಾಡಪ್ರಭು ಕೆಂಪೇಗೌಡರು ಅಭಿಮಾನಿಗಳು ಪ್ರತಿಮೆ ವಿಷಯವಾಗಿ ತನು ಧನ ಸಹಕಾರವನ್ನು ಸಂಘಕ್ಕೆ ನೀಡಬೇಕಾಗಿ ಕೆಂಪೇಗೌಡ ಸಂಘದ ಕಾರ್ಯದರ್ಶಿ ಆರ್. ಹನುಮಂತರಾಯ ತಿಳಿಸಿರುತ್ತಾರೆ.

