ಕೆಂಗಲ್ ಹನುಮಂತಯ್ಯ ಒಬ್ಬ ದಕ್ಷ ಆಡಳಿಗಾರ: ಸಿದ್ದರಾಮಯ್ಯ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೆಂಗಲ್ ಹನುಮಂತಯ್ಯ ಅವರು ಒಬ್ಬ ದಕ್ಷ ಆಡಳಿಗಾರರು. ಮುಖ್ಯಮಂತ್ರಿಯಾಗಿ
, ಕೇಂದ್ರದ ಮಂತ್ರಿಯಾಗಿ ಉತ್ತಮವಾಗಿ ಆಡಳಿತ ನಡೆಸಿದವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಭಾನುವಾರ ಕೆಂಗಲ್ ಹನುಮಂತಯ್ಯ ಅವರ ಪುಣ್ಯ ಸ್ಮರಣೆಯ ಪ್ರಯುಕ್ತ ಅವರ ಪ್ರತಿಮೆಗೆ ಮಾಪಾರ್ಪಣೆ ಮಾಡಿ ಮಾತನಾಡಿದರು.

ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಪುಣ್ಯತಿಥಿಯನ್ನು ಪ್ರತಿ ವ? ಆಚರಿಸಲಾಗುತ್ತಿದೆ. ಸರ್ಕಾರದ ಪರವಾಗಿ ಪ್ರತಿ ವರ್ಷವೂ ಪುಷ್ಪ ನಮನ ಸಲ್ಲಿಸುವ ಮೂಲಕ  ಗೌರವಿಸಿ ಅವರನ್ನು ಸ್ಮರಿಸಲಾಗುತ್ತಿದೆ ಎಂದರು.

ವಿಧಾನಸೌಧವನ್ನು ಕಟ್ಟಿಸಿದಾಗ ಸರ್ಕಾರದ ಕೆಲಸ ದೇವರ ಕೆಲಸ ಎಂದು ಹೇಳಿದರು. ಏಕೀಕರಣ ಆಗಬೇಕು ಎಂದು ಬಲವಾಗಿ ನಂಬಿ ಕನ್ನಡ ಮಾತನಾಡುವವರು ಒಂದಾಗಿ ನಾಡಿನ ಸರ್ವತೋಮುಖ ಅಭಿವೃದ್ಧಿ ಆಗಬೇಕೆಂದು ಶ್ರಮಿಸಿ ಕಟಿಬದ್ಧರಾಗಿ ಕೆಲಸ ಮಾಡಿದರು ಎಂದರು.

ನೆಹರೂ ಅವರೊಂದಿಗೆ ಅನ್ಯೋನ್ಯ ಸಂಬಂಧ ಕೆ.ಸಿ.ರೆಡ್ಡಿಯವರು ಮೊದಲನೇ ಮುಖ್ಯಮಂತ್ರಿಗಳಾಗಿದ್ದರೆ ಸ್ವಾತಂತ್ಯ್ರ ಬಂದ ನಂತರ ರಾಜ್ಯದ ಎರಡನೇ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದವರು. ನೆಹರೂ ಅವರು  ಪ್ರಧಾನಮಂತ್ರಿಗಳಾಗಿದ್ದಾಗ ಇವರು ಮುಖ್ಯಮಂತ್ರಿಗಳಾಗಿದ್ದರು ನೆಹರೂ ಅವರೊಂದಿಗೆ ಅನ್ಯೋನ್ಯ ಸಂಬಂಧವಿತ್ತು ಎಂದು ಮುಖ್ಯಮಂತ್ರಿಗಳು ಸ್ಮರಿಸಿದರು.

ಅವರ ಆಡಳಿತ ಜನಪರ, ದಕ್ಷವಾಗಿತ್ತು. ಅದನ್ನು ನಾವು ಸ್ಮರಿಸಿ ಅವರು ಹಾಕಿದ ದಾರಿಯಲ್ಲಿ ನಡೆಯುವ ಪ್ರಯತ್ನವನ್ನು ಮಾಡುತ್ತೇವೆ. ಅದೇ ನಾವು ಅವರಿಗೆ ಸಲ್ಲಿಸುವ ಗೌರವ ಎಂದರು.

ಈ ಸಂದರ್ಭದಲ್ಲಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು, ಕೆಂಗಲ್ ಹನುಮಂತಯ್ಯ ಅವರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

 

- Advertisement -  - Advertisement -  - Advertisement - 
Share This Article
error: Content is protected !!
";