ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೇರಳದ ಏರಿಮಲೆಯಲ್ಲಿ ಕನ್ನಡಿಗ ಮಾಲಾಧಾರಿಗಳ ಮೇಲಿನ ಪೊಲೀಸರ ದೌರ್ಜನ್ಯ ಘಟನೆಯನ್ನು ಜೆಡಿಎಸ್ ತೀವ್ರವಾಗಿ ಖಂಡಿಸಿದೆ.
ಪಿಣರಾಯಿ ವಿಜಯನ್ ಸರ್ಕಾರ, ಕರ್ನಾಟಕದ ಅಯ್ಯಪ್ಪ ಭಕ್ತರ ವಾಹನಗಳನ್ನು 45 ಕಿ.ಮೀ. ದೂರದಲ್ಲೇ ತಡೆದು, ಶಬರಿಮಲೆ ಸ್ವಾಮಿ ಅಯ್ಯಪ್ಪನ ದರ್ಶನಕ್ಕೆ ಹೊರಟಿದ್ದ ಕನ್ನಡಿಗ ಭಕ್ತರ ಮೇಲೆ ಪೊಲೀಸರ ದಬ್ಬಾಳಿಕೆ ನಡೆಸಿರುವುದು ಅಮಾನವೀಯ ನಡೆಯಾಗಿದೆ ಎಂದು ಜೆಡಿಎಸ್ ಉಗ್ರವಾಗಿ ಖಂಡಿಸಿದೆ.
ಕೇರಳ ಸರ್ಕಾರ ಹಿಂದೂ ವಿರೋಧಿಯಷ್ಟೇ ಅಲ್ಲದೇ, ಕನ್ನಡಿಗರ ವಿರೋಧಿಯಂತೆ ವರ್ತಿಸುತ್ತಿದೆ. ಕೇರಳದ ಕನ್ನಡ ಶಾಲೆಗಳಲ್ಲಿ ಮಲಯಾಳಂ ಭಾಷೆ ಕಡ್ಡಾಯಗೊಳಿಸಿದ, ಬಳಿಕ ಈಗ ಕನ್ನಡ ಭಾಷಿಗ ಭಕ್ತರ ಮೇಲೆ ಹಲ್ಲೆಯನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಜೆಡಿಎಸ್ ಎಚ್ಚರಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ಕೂಡಲೆ ಕೇರಳದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗ ಭಕ್ತರ ನೆರವಿಗೆ ಧಾವಿಸಿ, ಅವರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ಆಗ್ರಹಿಸಿದೆ.

