ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲ್ಲೂಕಿನ ತೂಬಗೆರೆ ಹೋಬಳಿಯ ತಿರುಮಗೊಂಡನಹಳ್ಳಿ ಗ್ರಾಮದಲ್ಲಿ ನೈಟಿಂಗಲ್ಸ್ ಮೆಡಿಕಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಸ್ಮೃತಿ ಗ್ರಾಮ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್ ಮುನಿಯಪ್ಪ ಮಾತನಾಡಿ, ಪ್ರತಿಯೊಬ್ಬರು ತಮ್ಮ ಹಿರಿಯರ ಆರೈಕೆಯಲ್ಲಿ ತೊಡಗಿಸಿಕೊಂಡು ತಮ್ಮ ಜೀವನವನ್ನು ಧನ್ಯವಾಗಿಸಿಕೊಳ್ಳಬೇಕು ಈ ಕಾಲದಲ್ಲಿ ತಂದೆ ತಾಯಿಯವರನ್ನು ಕಡೆಗಣಿಸಿ ಅವರನ್ನು ವೃದ್ದಾಶ್ರಮಕ್ಕೆ ಸೇರಿಸುತ್ತಾರೆ,ಈ ಪ್ರವೃತ್ತಿಯನ್ನು ಕಡಿಮೆ ಮಾಡಿಸಬೇಕು ನಾವು ನಮ್ಮ ಹಿರಿಯರ ಆರೈಕೆಯಲ್ಲಿ ತೊಡಗಿಸಿದಾಗ ನಮ್ಮ ಜೀವನ ಅಸನಾಗುತ್ತದೆ ಎಂದರು.
ನೈಟಿಂಗಲ್ಸ್ ನ ವತಿಯಿಂದ ಹಿರಿಯರ ಆರೈಕೆಗಾಗಿ ಹಿರಿಯರ ಜ್ಞಾಪಕ ಶಕ್ತಿ ಹೆಚ್ಚಿಸಿ ಉದ್ವೇಗ ಕಡಿಮೆಗೊಳಿಸುವ ಸಲುವಾಗಿ ಸ್ಮೃತಿ ಗ್ರಾಮವನ್ನು ಆಯೋಜಿಸಿ ಅವರ ಆರೈಕೆ ಮಾಡುವ ಕಾರ್ಯ ಶ್ಲಾಘನೀಯ ಎಂದರು.
ಈ ದಿನಗಳಲ್ಲಿ ಆಸ್ಪತ್ರೆ ,ಕಾಲೇಜು,ಕಟ್ಟುವುದು ಸಾಮಾನ್ಯವಾಗಿದೆ ಅದರಲ್ಲಿ ಹಿರಿಯರ ಆರೈಕೆಯಲ್ಲಿ ನೈಟಿಂಗಲ್ಸ್ ಬಹಳ ಉತ್ತಮ ಕೆಲಸ ಮಾಡುತ್ತಿದ್ದಾರೆ ಇವರಿಗೆ ನಮ್ಮ ಸರ್ಕಾರದ ವತಿಯಿಂದ ಯಾವುದೇ ರೀತಿಯ ಸಹಕಾರ ಸಹಾಯ ಬೇಕಾದಲ್ಲಿ ಸಹಕರಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು, ಟ್ರಸ್ಟ್ ರಾಧಾ ಎಸ್. ಮೂರ್ತಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಾಜಣ್ಣ, ಶ್ರೀ ಘಾಟಿ ಸುಬ್ರಮಣ್ಯ ದೇವಾಲಯ ಪ್ರಾಧಿಕಾರದ ಅಧ್ಯಕ್ಷ ರಂಗಪ್ಪ, ಸದಸ್ಯ ಮಹೇಶ್, ಗ್ರಾಮ ಪಂಚಾಯತಿ ಅಧ್ಯಕ್ಷೇ ಗಂಗ ರತ್ನಮ್ಮ ,ತೂಬಗೆರೆ ಹೋಬಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿ ಸಿದ್ದಪ್ಪ ಕಾರ್ಯನಿರ್ವಾಹಕ ಅಧಿಕಾರಿ ಮುನಿರಾಜು, ಉಪಸ್ಥಿತರಿದ್ದರು.