ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
RSS ಮುಖಂಡರಾದ ದತ್ತಾತ್ರೇಯ ಹೊಸಬಾಳೆ ಅವರು ತುರ್ತು ಪರಿಸ್ಥಿತಿ ಕುರಿತು ಸಂವಿಧಾನದಿಂದ ತೆಗಿಬೇಕು ಎಂದು ಮಾತ್ನಾಡಿದ್ದಾರೆ ಎಂದು ಸಂಸದ ಗೋವಿಂದ ಎಂ ಕಾರಜೋಳ ತಿಳಿಸಿದರು.
ಇದನ್ನ ಕಾಂಗ್ರೆಸ್ ನಾಯಕರು BJP ಸಂವಿಧಾನ ವಿರೋಧಿ ಎನ್ನುತ್ತಿದ್ದಾರೆ ಎಂದು ವಿರೋಧ ವ್ಯಕ್ತಪಡಿಸಿದ ಸಂಸದರು, 1975 ರಲ್ಲಿ ತುರ್ತು ಪರಿಸ್ಥಿತಿ ಜಾರಿ ಮಾಡಿ ಇಂದಿರಾಗಾಂಧಿ ಅವರು ಎಲ್ಲರನ್ನ ಜೈಲಿಗೆ ಇಟ್ಟರು ಎಂದು ಕಿಡಿ ಕಾರಿದರು.
ಖರ್ಗೆ, ಸಿದ್ದರಾಮಯ್ಯ, ಸೋನಿಯಾ, ರಾಹುಲ್ ಗಾಂಧಿ ಎಲ್ಲರು ದೇಶದ ಕ್ಷಮೆ ಕೇಳಬೇಕು. ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದ ಪೀಠಿಕೆಯಲ್ಲಿ ತುರ್ತು ಪರಿಸ್ಥಿತಿ ಕುರಿತು ವಿರೋಧ ಮಾಡಿದ್ದರು. ಕಾಂಗ್ರೆಸ್ ಯಾವತ್ತೂ ಕೂಡಾ ಸಂವಿಧಾನ & ಅಂಬೇಡ್ಕರ್ ಅವರಿಗೆ ಗೌರವ ನೀಡಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಸಂಸದ ಕಾರಜೋಳ ಹರಿಹಾಯ್ದರು.