ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಉತ್ತರ ಪ್ರದೇಶದ ಮುಖ್ಯಮಂತ್ರಿಗಳು, ಸಂತ ಶ್ರೀ ಯೋಗಿ ಆದಿತ್ಯನಾಥ್ ಅವರ ಬಗ್ಗೆ ಹಾಗೂ ಹಿಂದೂ ಸಮಾಜದ ಸಂತರು ಧರಿಸುವ ಕಾವಿ ವಸ್ತ್ರದ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನಾಲಗೆ ಹರಿಬಿಟ್ಟಿದ್ದಾರೆ ಎಂದು ಬಿಜೆಪಿ ಖರ್ಗೆ ವಿರುದ್ಧ ವಾಗ್ದಾಳಿ ಮಾಡಿದೆ.
ತಮ್ಮ ತಾಯಿಯನ್ನು ಕೊಂದ, ಹಿಂದೂಗಳ ಮಾರಣಹೋಮ ನಡೆಸಿದ ತಮ್ಮ ಮನೆಯನ್ನು ಸುಟ್ಟು ಆ ಊರಿನಿಂದಲೇ ಓಡಿಹೋಗುವಂತೆ ಮಾಡಿದ ಹೈದರಾಬಾದ ನಿಜಾಮರ ಕ್ರೂರಿ ರಜಾಕರ ಬಗ್ಗೆ ಖರ್ಗೆ ಅವರು ಮಾತೇ ಆಡದಿರುವ ಬಗ್ಗೆ ಯೋಗಿ ಆದಿತ್ಯನಾಥ್‌ಅವರು ಕಿಡಿ ಕಾರಿದ್ದಾರೆ.
ಓಲೈಕೆ ರಾಜಕಾರಣಕ್ಕಾಗಿ, ತಮ್ಮ ಕುಟುಂಬವನ್ನೇ ಅಳಿಸಿ ಹಾಕಿದವರ ಬಗ್ಗೆ ಮಾತನಾಡದೇ, ಹಿಂದೂ ಸಮಾಜದ ಸಂತ ಮುನಿಗಳ ಕಾವಿ ವಸ್ತ್ರದ ಬಗ್ಗೆ ಮಾತನಾಡಿದ್ದು ಕಾಂಗ್ರೆಸ್ಸಿನಲ್ಲಿ ಅವರ ಗುಲಾಮಿ ಮನಸ್ಥಿತಿಯನ್ನು ತೋರುತ್ತದೆ. ಹಿಂದೂ ವಿರೋಧಿ ಕಾಂಗ್ರೆಸ್ ಎಂದು ಬಿಜೆಪಿ ಟ್ಯಾಗ್ ಲೈನ್ ಹಾಕಿ ಟೀಕಿಸಿದೆ.