ಖೋಖೋ ವಿಶ್ವಕಪ್‌ ಗೆದ್ದ ಕ್ರೀಡಾಪಟುಗಳಿಗೆ ಸರ್ಕಾರಿ ಹುದ್ದೆ, ಸಹಾಯಧನ ನೀಡಲು ಆಗ್ರಹ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗುಲಾಮಿ ಮನಸ್ಥಿತಿಯಿಂದ ಹೊರಬನ್ನಿ ಕಾಂಗ್ರೆಸ್ಸಿಗರೇ ಎಂದು ಜೆಡಿಎಸ್ ಆಗ್ರಹ ಮಾಡಿದೆ.

ಖೋಖೋ ವಿಶ್ವಕಪ್‌ವಿಜೇತ ಆಟಗಾರರಿಗೆ ಸೂಕ್ತ ಪ್ರೋತ್ಸಾಹಧನ ಹಾಗೂ ಸರ್ಕಾರಿ ಉದ್ಯೋಗ ನೀಡಲು ಹೈಕಮಾಂಡ್‌ಆದೇಶವೇನಾದರೂ ಬರಬೇಕೇ ? ಎಂದು ಖಾರವಾಗಿ ಜೆಡಿಎಸ್ ಪ್ರಶ್ನಿಸಿದೆ.

ಖೋಖೋ ವಿಶ್ವಕಪ್‌ಗೆದ್ದ ಭಾರತ ತಂಡದಲ್ಲಿದ್ದ ಇತರೆ ರಾಜ್ಯಗಳ ಆಟಗಾರರಿಗೆ ಆಯಾ ರಾಜ್ಯಗಳು ಸೂಕ್ತ ಪ್ರೋತ್ಸಾಹಧನದ ಜೊತೆ ಸರ್ಕಾರಿ ಹುದ್ದೆ ನೀಡಿ ಗೌರವಿಸಿದೆ.

ಕೇರಳದವರಿಗೆ ಲಕ್ಷ ಲಕ್ಷ ಕೊಡುವ ಸಿದ್ದರಾಮಯ್ಯ ಸರ್ಕಾರ , ರಾಜ್ಯದ ಗ್ರಾಮೀಣ ಪ್ರತಿಭೆಗಳ ಸಾಧನೆಗೆ ಕೇವಲ ₹5 ಲಕ್ಷ ನೀಡಿ ಕನ್ನಡಿಗರಿಗೆ ಅಪಮಾನ ಮಾಡುತ್ತಿದೆ ಎಂದು ಜೆಡಿಎಸ್ ಹರಿಹಾಯ್ದಿದೆ.

ಸರ್ಕಾರ ಕ್ರೀಡಾಪಟುಗಳ ಸಾಧನೆ ಮತ್ತು ಪರಿಶ್ರಮವನ್ನು ಅವಮಾನಿಸದೆ ಗೌರವದಿಂದ ನಡೆಸಿಕೊಂಡು, ಭವಿಷ್ಯದ ಆಟಗಾರರಿಗೂ ಸೂಕ್ತ ಪ್ರೋತ್ಸಾಹ ನೀಡಬೇಕು ಎಂದು ಜೆಡಿಎಸ್ ಆಗ್ರಹ ಮಾಡಿದೆ.

 

 

- Advertisement -  - Advertisement -  - Advertisement - 
Share This Article
error: Content is protected !!
";