ಸರ್ಕಾರ ಟೀಕಿಸಿದ್ದ ಕಿರಣ್ ಮಜುಂದಾರ್ ಸಿಎಂ-ಡಿಸಿಎಂ ದಿಢೀರ್ ಭೇಟಿ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ಗುಂಡಿ ಬಿದ್ದ ರಸ್ತೆ ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿದಂತೆ ಇತ್ತೀಚೆಗೆ ರಾಜ್ಯ ಸರ್ಕಾರದ ಕಾರ್ಯ ವೈಖರಿ ಬಗ್ಗೆ ಅಸಮಾಧಾನ ಹೊರಹಾಕಿದ್ದ ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್-ಶಾ ಅವರು ಅಕ್ಟೋಬರ್-21ರಂದು ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ದಿಢೀರ್ ಭೇಟಿ ಮಾಡಿ ಚರ್ಚಿಸುವ ಮೂಲಕ ಮುಸುಕಿನ ಗುದ್ದಾಟಕ್ಕೆ ತೆರೆ ಎಳೆದಿದ್ದಾರೆ.

ಬೆಂಗಳೂರಿನ ರಸ್ತೆ ಗುಂಡಿ, ಕಸ ಹಾಗೂ ಟ್ರಾಫಿಕ್ ಸಮಸ್ಯೆ ಸೇರಿದಂತೆ ಮೂಲ ಸೌಕರ್ಯ ಕುರಿತು ಕಿರಣ್ ಮಜುಂದಾರ್-ಶಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಧ್ವನಿ ಎತ್ತಿದ್ದರು. ಇದು ಉದ್ಯಮಿಗಳು ಮತ್ತು ಸರ್ಕಾರದ ನಡುವೆ ಭಾರೀ  ಜಟಾಪಟಿಗೆ ಕಾರಣವಾಗಿತ್ತು.
ಈ  ಬೆಳವಣಿಗೆಗಳ ನಡುವೆ ಕಿರಣ್ ಮಜುಂದಾರ್ ದಿಢೀರ್ ಸಿಎಂ-ಡಿಸಿಎ ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ.

- Advertisement - 

ಶಾ ಭೇಟಿ ಉದ್ದೇಶ?
ಬೆಂಗಳೂರಿನಲ್ಲಿ ಮೂಲಸೌಕರ್ಯ ಕುರಿತು ಕಿರಣ್ ಮಜುಂದಾರ್ ಶಾ ಮತ್ತು ಡಿಸಿಎಂ ಸೇರಿದಂತೆ ಸಚಿವರ ನಡುವಿನ ವಾಗ್ವಾದದ ನಂತರ ಈ ಭೇಟಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಆದರೆ ಕಿರಣ್
ಮಜುಂದಾರ್ ಶಾ ಅವರು ಉದ್ಯಮಿಯಾಗಿರುವ ತಮ್ಮ ಸೋದರಳಿಯನ ಮದುವೆಗೆ ಆಹ್ವಾನಿಸಲು ಸಿಎಂ ಹಾಗೂ ಡಿಸಿಎಂ ಭೇಟಿ ಮಾಡಿ ಆಹ್ವಾನಿಸಿದ್ದಾರೆ ಎನ್ನುವ ಮಾಹಿತಿ ಲಭ್ಯ ಆಗುತ್ತಿದೆ.

- Advertisement - 

ಉದ್ಯಮಿ ಕಿರಣ್ ಮಜುಂದಾರ್​ ಶಾ ಅವರು ಡಿಸಿಎಂ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ ಶಿವಕುಮಾರ್, ಬೆಂಗಳೂರು ಮತ್ತು ರಾಜ್ಯದ ಹಿತಕ್ಕೆ ಸಹಕಾರ ನೀಡುತ್ತೇನೆ ಎಂದಿದ್ದಾರೆ. ಅವರನ್ನೆಲ್ಲ ಕರೆದು ಮೀಟಿಂಗ್ ಮಾಡುತ್ತೇನೆ. ಈಗ ಎಲ್ಲಾ ಪಾಲಿಕೆಗಳಿಗೆ ಹೋಗಿ ಭೇಟಿ ಮಾಡುತ್ತಿದ್ದೇನೆ. ಬಳಿಕ ಐಟಿ-ಬಿಟಿಯವರನ್ನ ಕರೆದು ಸಭೆ ಮಾಡುತ್ತೇನೆ ಎಂದು ತಿಳಿಸಿದರು.

ಉದ್ಯಮಿಗಳಾದ ಕಿರಣ್ ಮಜುಂದಾರ್ ಮತ್ತು ಉದ್ಯಮಿ ಟಿ.ವಿ ಮೋಹನ್ ದಾಸ್ ಪೈ ಅವರುಗಳು, ಬೆಂಗಳೂರಿನ ಮೂಲಭೂತ ಸೌಕರ್ಯ, ಗುಂಡಿ ಬಿದ್ದ ರಸ್ತೆಯ ಬಗ್ಗೆ ಸಾಮಾಜಿಜ ಜಾಲತಾಣಗಳ ಮೂಲಕ ಧ್ವನಿ ಎತ್ತುತ್ತಲೇ ಬರುತ್ತಿದ್ದಾರೆ. ಉದ್ಯಮಿಗಳ ಟೀಕೆ, ರಾಷ್ಟ್ರ ಮಟ್ಟದಲ್ಲಿ ದೊಡ್ಡ ಚರ್ಚೆಯಾಗಿತ್ತು. ಸರ್ಕಾರಕ್ಕೆ ಇದು ತೀವ್ರ ಮುಜುಗರವನ್ನುಂಟು ಮಾಡಿದೆ. ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ವಾಕ್ಸಮರಕ್ಕೆ ಕಾರಣವಾಗಿತ್ತು.

ಇದರ ಬೆನ್ನಲ್ಲೇ ಕಿರಣ್ ಮಜುಂದಾರ್ ಶಾ ಮತ್ತು ಮೋಹನ್ ದಾಸ್ ಪೈ ಇಬ್ಬಗೆ ನೀತಿ ಅನುಸರಿಸುತ್ತಿದ್ದಾರೆಂದು ಕಾಂಗ್ರೆಸ್ ನಾಯಕರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದಕ್ಕೆ ಕಿರಣ್ ಶಾ ಪ್ರತಿಕ್ರಿಯಿಸಿ, ಬಿಜೆಪಿ ಕಾಲದಲ್ಲೂ ನಾವು ಮೂಲಭೂತ ಸೌಕರ್ಯ ಸರಿಯಿಲ್ಲದಿದ್ದಾಗ ಎಚ್ಚರಿಸಿದ್ದೆವು ಎಂದು ಹೇಳಿದ್ದರು.

ಬೆಂಗಳೂರಿನ ಹದೆಗೆಟ್ಟ ರಸ್ತೆಯ ಬಗ್ಗೆ ಬಹಿರಂಗವಾಗಿಯೇ ಬೇಸರ ವ್ಯಕ್ತಪಡಿಸಿದ್ದ ಕಿರಣ್ ಮಜುಂದಾರ್ ಹಲವು ರಸ್ತೆಗಳ ನಿರ್ವಹಣೆ ಮಾಡುವ ಬಗ್ಗೆ ಹೇಳಿಕೆ ನೀಡಿದ್ದರು. ಡಿಸಿಎಂ ಶಿವಕುಮಾರ್ ಅವರು ಪರೋಕ್ಷವಾಗಿ ತಿರುಗೇಟು ನೀಡಿ ಟಾಂಗ್ ನೀಡಿದ್ದರು.
ಈ ಎಲ್ಲಾ ಬೆಳವಣಿಗೆಗಳ ನಡುವೆ ಕಿರುಣ್ ಮಜುಂದಾರ್ ಅವರು ಸಿಎಂ ಹಾಗೂ ಡಿಸಿಎಂ ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ.

45 ನಿಮಿಷ ಚರ್ಚೆ-
ಕಿರಣ್ ಮಜುಂದಾರ್ ಶಾ ಡಿಸಿಎಂ ನಿವಾಸಕ್ಕೆ ಆಗಮಿಸಿ ಸುಮಾರು
45 ನಿಮಿಷಗಳ ಕಾಲ ಚರ್ಚೆ ನಡೆಸಿದ್ದಾರೆ. ಈ ವೇಳೆ ರಸ್ತೆ ಗುಂಡಿ, ಕಸದ ಸಮಸ್ಯೆ ಸೇರಿದಂತೆ ಮೂಲಸೌಕರ್ಯ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಚರ್ಚೆಯ ವೇಳೆ ಮಜುಂದಾರ್ ಶಾ ಬೆಂಗಳೂರಿನ ಅಭಿವೃದ್ಧಿಯಲ್ಲಿ ನಾವೀನ್ಯತೆ ಮತ್ತು ಇಡೀ ರಾಜ್ಯದ ಅಭಿವೃದ್ಧಿ ಬಗ್ಗೆಯೂ ವಿಸ್ತೃತ ಚರ್ಚೆ ನಡೆಸಿದರು ಎಂಬ ಮಾಹಿತಿ ದೊರೆತಿದೆ.

ಡಿಸಿಎಂ ಡಿ.ಕೆ.ಶಿವಕುಮಾರ್ ಈ ಕುರಿತು ಪ್ರತಿಕ್ರಿಯೆ ನೀಡಿ, ಬಯೋಕಾನ್ ಮುಖ್ಯಸ್ಥೆ ಹಾಗೂ ಉದ್ಯಮಿ ಕಿರಣ್ ಮಜುಂದಾರ್ ಶಾ ಅವರ ಭೇಟಿಯಿಂದ ಸಂತೋಷವಾಯಿತು. ಬೆಂಗಳೂರಿನ ಬೆಳವಣಿಗೆ, ನಾವೀನ್ಯತೆ ಮತ್ತು ರಾಜ್ಯದ ಅಭಿವೃದ್ಧಿಯ ಬಗ್ಗೆ ಸಮಾಲೋಚನೆ ನಡೆಸಿದೆವು ಎಂದು ತಿಳಿಸಿದರು.

ಬಯೋಕಾನ್ ಸಂಸ್ಥೆಗೆ ವಿದೇಶಿ ಉದ್ಯಮಿಗಳು ಭೇಟಿ ನೀಡಿದ ವೇಳೆ, ರಸ್ತೆಗಳು ಏಕೆ ಇಷ್ಟು ಕೆಟ್ಟದಾಗಿವೆ?. ಸುತ್ತಮುತ್ತ ಇಷ್ಟು ಕಸಗಳ ರಾಶಿ ಏಕಿದೆ? ಸರ್ಕಾರ ಬಂಡವಾಳ ಹೂಡಿಕೆಗೆ ಬೆಂಬಲಿಸಲು ಬಯಸುತ್ತಿಲ್ಲವೇ ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಪರಿಸ್ಥಿತಿ ಉತ್ತಮವಾಗಿದ್ದರೂ ಏಕೆ ಸಮಸ್ಯೆಗಳನ್ನು ನಿವಾರಿಸಲು ಮನಸ್ಸು ಮಾಡುತ್ತಿಲ್ಲ ಎಂಬುದು ನನಗೆ ಅರ್ಥವಾಗುತ್ತಿಲ್ಲ ಎನ್ನುವ ಅರ್ಥದಲ್ಲಿ ಬೇಸರ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

Share This Article
error: Content is protected !!
";