ವಕ್ಫ್ ಬೋರ್ಡ್ ಹೆಸರಿಗೆ ರೈತರ ಜಮೀನು ಸೇರಿಸದಂತೆ ಕಿಸಾನ್ ಸಂಘ ಪ್ರತಿಭಟನೆ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಭಾರತೀಯ ಕಿಸಾನ್ ಸಂಘ ಹಿರಿಯೂರು ತಾಲ್ಲೂಕು ಘಟಕದ ವತಿಯಿಂದ ಇತ್ತೀಚಿಗೆ ರಾಜ್ಯದಾದ್ಯಂತ ಸಂಚಲನ ಹುಟ್ಟು ಹಾಕಿದ ವಕ್ಫ್ ಬೋರ್ಡ್ ವಿಚಾರವಾಗಿ ಹಿರಿಯೂರು ತಾಲ್ಲೂಕಿನಾದ್ಯಂತ ಯಾವುದೇ ರೈತರ ಜಮೀನುಗಳನ್ನು ಅಕ್ರಮವಾಗಿ ಪಹಣಿಯಲ್ಲಿ ವಕ್ಫ್ ಬೋರ್ಡ್ ಅಥವಾ ಇನ್ಯಾವುದೇ ಸಂಘ ಸಂಸ್ಥೆಯ ಹೆಸರನ್ನು ಸೇರಿಸಬಾರದು ಎಂದು  ತಾಲ್ಲೂಕು ದಂಡಾಧಿಕಾರಿಗಳಿಗೆ  ಇಂದು ಭಾರತೀಯ ಕಿಸಾನ್ ಸಂಘವು ಮನವಿ ಪತ್ರವನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷ ಗಡಾರಿ ಕೃಷ್ಣಪ್ಪ ಮಾತನಾಡಿ ಹಿರಿಯೂರು ತಾಲ್ಲೂಕಿನ ರೈತರ ಒಂದು ಇಂಚು ಜಮೀನನ್ನು ಯಾವುದೇ ಸಂಘ ಸಂಸ್ಥೆಗಳು ಅಕ್ರಮವಾಗಿ ವಶಪಡಿಸಿಕೊಂಡಲ್ಲಿ ಅಂತಹದ್ದರ ವಿರುದ್ಧ ಭಾರತೀಯ ಕಿಸಾನ್ ಸಂಘವು ಉಗ್ರ ಹೋರಾಟ ಮಾಡುತ್ತದೆ ಎಂದು ಎಚ್ಚರಿಕೆ ನೀಡಿದರು.

ಭಾರತೀಯ ಕಿಸಾನ್ ಸಂಘ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾತ್ರಿಕೇನಹಳ್ಳಿ ಮಂಜುನಾಥ್ ಮಾತನಾಡಿ ಹಿರಿಯೂರು ತಾಲ್ಲೂಕಿನ ರೈತರಲ್ಲಿ ತಾವುಗಳು ತಮ್ಮ ತಮ್ಮ ಜಮೀನಿನ ಪಹಣಿಯನ್ನು ತೆಗೆದುಕೊಂಡು ಪರೀಕ್ಷಿಸಿಕೊಳ್ಳಬೇಕು ಇಲ್ಲವಾದರೆ ಆರ್. ಟಿ.ಸಿ.11 ನೇ ಕಾಲಂನಲ್ಲಿ ನಿಮ್ಮ ಜಮೀನಿನ  ಹಕ್ಕನ್ನು ಸದ್ದಿಲ್ಲದೇ ನಿಮಗೆ ನೋಟಿಸ್ ಕೂಡ ಕೊಡದೇ ಆಕ್ರಮಿಸಿ ಕೊಳ್ಳುತ್ತಿದ್ದಾರೆ .

ಇದರಿಂದ ನಿಮ್ಮ ಜಮೀನಿನ ವಾರಸುದಾರರು ಬೇರೆಯವರಾಗುವುದರಿಂದ ಬ್ಯಾಂಕುಗಳ ಸಾಲ ಸೌಲಭ್ಯದಿಂದ ವಂಚಿತರಾಗುತ್ತೀರಿ. ಇಂತಹ ಪ್ರಕರಣ ಗಳೇನಾದರು ಕಂಡು ಬಂದರೆ ಭಾರತೀಯ ಕಿಸಾನ್ ಸಂಘವು ನಿಮ್ಮ ಜೊತೆಗಿದ್ದು ನಿಮಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಹೋರಾಟ ಭಾಗಿಯಾಗಲಿದೆ ಎಂದು ರೈತರಿಗೆ ಆತ್ಮಸ್ಥೈರ್ಯ ತುಂಬಿದರು.

 ಈ ಸಂದರ್ಭದಲ್ಲಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ದಿಂಡಾವರ ಚಂದ್ರಗಿರಿ ತಾಲ್ಲೂಕು ಉಪಾಧ್ಯಾಕ್ಷ ಪರಮೇನಹಳ್ಳಿ ರಂಗನಾಥ್, ತಾಲ್ಲೂಕು ಪ್ರಮುಖ ತಿಪ್ಪೇಸ್ವಾಮಿ, ಮೆಟಿಕುರ್ಕೆ ಜಯಣ್ಣ, ಸಹ ಕಾರ್ಯದರ್ಶಿ ಕೆ.ಕೆ.ಹಟ್ಟಿ ಜಯಪ್ರಕಾಶ್, ತಾಲ್ಲೂಕು ಪದಾಧಿಕಾರಿಗಳಾದ ಎ.ವಿ.ಕೊಟ್ಟಿಗೆ ಸುರೇಶ್, ಕಾಳಿದಾಸ್  ಮುಂತಾದವರು ಇದ್ದರು.

- Advertisement -  - Advertisement - 
Share This Article
error: Content is protected !!
";