ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
2026ರ ನವ ದೆಹಲಿಯಲ್ಲಿ ನಡೆಯುವ ಗಣ ರಾಜ್ಯೋತ್ಸವದ ಪೆರೇಡ್ ಗೆ N.C. C. ಕರ್ನಾಟಕ.. ಗೋವಾ ಬೆಟಾಲಿಯನ್ ಗೆ ದೊಡ್ಡಬಳ್ಳಾಪುರ ನಗರದ ರೇಖಾ ಹಾಗೂ ಕೆ. ಜ್. ನರೇಂದ್ರ ಬಾಬು ರವರ ಪುತ್ರಿ, ಆಳ್ವಾಸ್ ಎಂಜಿನಿಯರಿಂಗ್ ವಿದ್ಯಾರ್ಥಿನಿ ಕುಮಾರಿ ಕೆ. ಎನ್.ಐಶ್ವರ್ಯ ಆಯ್ಕೆ ಯಾಗಿದ್ದಾರೆ.
ದೊಡ್ಡಬಳ್ಳಾಪುರದಿಂದ ಪ್ರಪ್ರಥಮವಾಗಿ ದೆಹಲಿಯ ಗಣ ರಾಜ್ಯೋತ್ಸವದ ಪೆರೇಡ್ ಗೆ ಆಯ್ಕೆ ಯಾಗಿರುವ ಐಶ್ವರ್ಯ ರನ್ನು ತಾಲೂಕಿನ ಹಲವಾರು ಗಣ್ಯರು ಅಭಿನಂದಿಸಿದ್ದಾರೆ.

