ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನ ಕೊಟ್ರೆ ಮಂತ್ರಿ ಸ್ಥಾನ ಬಿಡ್ತೀನಿ ಎಂದು ಸಚಿವನಾಗಿದ್ದಾಗಲೇ ಹೇಳಿದ್ದೆ. ಈಗ ಬಿಡೋಕೆ ಯಾವುದೇ ಸಚಿವ ಸ್ಥಾನ ಇಲ್ಲ.
ಆದರೆ ಕೆಪಿಸಿಸಿ ಅಧ್ಯಕ್ಷನಾದ್ರೆ ಪಕ್ಷ ಸಂಘಟನೆಗೆ ಒತ್ತು ನೀಡುತ್ತೇನೆ. ಹೈಕಮಾಂಡ್ಗೆ ಈ ಕುರಿತು ಈಗಾಗಲೇ ವಿಷಯ ತಿಳಿಸಿದ್ದೇನೆ ಎಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ.
ಸಂಪುಟ ಪುನಾರಚನೆ ಆದ್ರೆ ಮತ್ತೆ ಸಚಿವರು ಆಗ್ತೀರಾ ಎಂಬ ಪ್ರಶ್ನೆಗೂ ಉತ್ತರಿಸಿದ ಅವರು, ಸಚಿವನಾದರೂ ಹೀಗೆ ಇರ್ತೇನೆ. ಇಲ್ಲ ಅಂದ್ರೂ ಹೀಗೆ ಇದ್ದೇನೆ. ನಾನು ಯಾವತ್ತೂ ಅಧಿಕಾರ ಹುಡುಕಿಕೊಂಡು ಹೋದವನಲ್ಲ ಎಂದು ತಿಳಿಸಿದ್ದಾರೆ.

