ಸತತ 7ನೇ ಬಾರಿಗೆ ಅಧ್ಯಕ್ಷ ಸ್ಥಾನ ಅಲಂಕರಿಸಿದ ಕೆ.ಎನ್. ರಾಜಣ್ಣ

News Desk

ಚಂದ್ರವಳ್ಳಿ ನ್ಯೂಸ್, ತುಮಕೂರು :
ತುಮಕೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಮಾಜಿ ಸಚಿವ ಕೆ. ಎನ್. ರಾಜಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ನಾಹಿದಾ ಜಂಜಂ ಪ್ರಕಟಿಸಿದರು.
ನಿರ್ದೇಶಕರಾಗಿ ಆಯ್ಕೆಯಾಗಿರುವ 14 ಮಂದಿಯಲ್ಲಿ ಬಹುತೇಕ ರಾಜಣ್ಣ ಬೆಂಬಲಿತರೇ ಗೆಲುವು ಸಾಧಿಸಿರುವುದು ಮತ್ತೊಂದು ದಾಖಲೆಯಾಗಿದೆ.

ಸತತ 7ನೇ ಬಾರಿಗೆ ಅಧ್ಯಕ್ಷ ಸ್ಥಾನ ಅಲಂಕರಿಸುತ್ತಿರುವುದು ಕೆ. ಎನ್. ರಾಜಣ್ಣ ಅವರಿಗೆ ಹೆಗ್ಗಳಿಕೆ.
ನೂತನ ಅಧ್ಯಕ್ಷ ರಾಜಣ್ಣ ಸೇರಿದಂತೆ ಉಪಾಧ್ಯಕ್ಷರು, ನೂತನ ನಿರ್ದೇಶಕ ಮಂಡಳಿಯವರು ಹೂಗುಚ್ಛ ನೀಡಿ ಹಾರ ಹಾಕಿ ಅಭಿನಂದಿಸಿದರು.
ಡಿಸಿಸಿ ಬ್ಯಾಂಕ್ ಹೊರಗಡೆ ಬೃಹತ್ ಸಂಖ್ಯೆಯಲ್ಲಿ ಜಮಾಯಿಸಿದ್ದ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಜೈ ಕೆಎನ್ಆರ್
, ಸಹಕಾರ ಸಾರ್ವಭೌಮ ಎಂದು ಘೋಷಣೆ ಕೂಗುತ್ತಾ ವಿಜಯೋತ್ಸವ ಆಚರಿಸಿದರು.

- Advertisement - 

ನೂತನ ಅಧ್ಯಕ್ಷ ಕೆ.ಎನ್.ರಾಜಣ್ಣ ಮಾತನಾಡಿ ತುಮಕೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಅಧ್ಯಕ್ಷರನ್ನಾಗಿ ಅವಿರೋಧ ಆಯ್ಕೆ ಮಾಡಿದ್ದಾರೆ. ಮುಂದಿನ ಐದು ವರ್ಷಗಳ ಅವಧಿಗೆ ಎಲ್ಲ ನಿರ್ದೇಶಕರು ಅವಿರೋಧ ಆಯ್ಕೆ ಮಾಡಿದ್ದಾರೆ. ಮಧುಗಿರಿ ಉಪವಿಭಾಗಾಧಿಕಾರಿಗಳು ಚುನಾವಣಾ ಅಧಿಕಾರಿಯಾಗಿ ಕೆಲಸ ಮಾಡಿದರು ಎಂದು ಮಾಜಿ ಸಚಿವ ಕೆ. ಎನ್.‌ರಾಜಣ್ಣ ತಿಳಿಸಿದರು.

ರೈತರಿಗೆ, ಹಣಕಾಸಿನ ಸೌಲಭ್ಯ ನೀಡಿ ಸ್ವಾಭಿಮಾನಿಗಳಾಗಿ ಬದುಕು ನಡೆಸಲು ಅನುಕೂಲ ಮಾಡುವುದು ನಮ್ಮ ಆಡಳಿತ ಮಂಡಳಿ ಉದ್ದೇಶವಾಗಿದೆ. ಗ್ರಾಮೀಣ ಭಾಗದ ಜನರ ಅಭಿವೃದ್ಧಿಗೆ ಕೆಲಸ ಮಾಡುತ್ತೇವೆ. ಹೊಸ ಯೋಜನೆಗಳು, ರೈತರಿಗೆ ಉಪಕಸುಬು ಮಾಡಲು ಹೆಚ್ಚು ಒತ್ತು ನೀಡುತ್ತೇವೆ ಎಂದು ಹೇಳಿದರು.
ನಬಾರ್ಡ್​ನಿಂದ 2340 ಕೋಟಿ ರೂ. ಬರಲಿದೆ. ಹಣಕಾಸಿನ ಸೌಲಭ್ಯ ಬರುವುದು ಕಡಿಮೆಯಾಗಿದ್ದರೂ ಆಥಿಕ ಸಂಪನ್ಮೂಲ ಕ್ರೋಢೀಕರಿಸಿ ಸಾಲ ಸೌಲಭ್ಯವನ್ನು ಕಡಿಮೆ ಬಡ್ಡಿದರದಲ್ಲಿ ನೀಡಲಾಗುವುದು ಎಂದು ತಿಳಿಸಿದರು.

- Advertisement - 

ಕೇಂದ್ರ ಸರ್ಕಾರ ಒಂದು ಕಡೆ ಜಿಎಸ್​​ಟಿ ಕಡಿಮೆ ಮಾಡಿರುವುದು ಸ್ವಾಗತಾರ್ಹ, ಆದರೆ ರಾಜ್ಯ ಸರ್ಕಾರಗಳಿಗೆ ಬರುವ ಪಾಲು ಕಡಿಮೆಯಾಗಲಿದೆ. ಕಡಿಮೆ ಆಗುವ ಹಣವನ್ನು ಕೇಂದ್ರ ಸರ್ಕಾರ ಭರಿಸಿಕೊಡಬೇಕಿದೆ ಎಂದರು.

ರಾಜ್ಯದ ಆರ್ಥಿಕ ಸ್ಥಿತಿ ಸರಿಯಿಲ್ಲದ ಕಾರಣ ಸಾಲ ಮನ್ನಾ ಮಾಡಲು ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡುವುದಿಲ್ಲ. ಬದಲಾಗಿ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ ಎಂದು ಅವರು ಹೇಳಿದರು.

 

 

 

Share This Article
error: Content is protected !!
";