ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಇಲ್ಲಿನ ಲಯನ್ಸ್‌ಕ್ಲಬ್‌ಆಫ್‌ದೊಡ್ಡಬಳ್ಳಾಪುರ ಆರ್.ಎಲ್.ಜಾಲಪ್ಪ ಇನ್ಸ್‌ಟಿಟ್ಯೂಷನ್ಸ್‌ಹಾಗೂ ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳ ನೇತೃತ್ವದಲ್ಲಿ ಶನಿವಾರ ಸ್ವಯಂಪ್ರೇರಿತ ಮೆಗಾ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್‌ಕಮ್ಯೂನಿಕೇಶನ್‌ವಿಭಾಗದ ಸಭಾಂಗಣ ಹಾಗೂ ಶ್ರೀ ದೇವರಾಜ ಅರಸ್‌ಅಂತಾರಾಷ್ಟ್ರೀಯ ವಸತಿ ಶಾಲೆಯ ಸಭಾಂಗಣದಲ್ಲಿ ನಡೆದ ಶಿಬಿರದಲ್ಲಿ ಲಯನ್ಸ್‌ರಕ್ತನಿಧಿ ಹಾಗೂ ಕೋಲಾರದ ಜಾಲಪ್ಪ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯ ರಕ್ತನಿಧಿಗಳ ಮೂಲಕ ರಕ್ತ ಸಂಗ್ರಹ ಮಾಡಲಾಯಿತು.
ಲಯನ್ಸ್‌ಜಿಲ್ಲೆ 317ಎಫ್‌ನ ರಕ್ತನಿಧಿ ಸಂಯೋಜಕ ಚಿನ್ನಪ್ಪ ಥಾಮಸ್‌ಶಿಬಿರ ಉದ್ಘಾಟಿಸಿ ಮಾತನಾಡಿ, ದಾನಗಳಲ್ಲಿ ಸರ್ವಶ್ರೇಷ್ಠ ಎನಿಸಿರುವ ರಕ್ತದಾನವು ಜೀವದಾನಕ್ಕೆ ಸಮಾನವಾದದ್ದು. ಜಗತ್ತು ಎಷ್ಟೇ ಮುಂದುವರೆದರೂ, ವೈಜ್ಞಾನಿಕವಾಗಿ ಪ್ರಗತಿ ಹೊಂದುತ್ತಿದ್ದರೂ ಈವರೆಗೆ ಒಂದೇ ಒಂದು ಹನಿ ರಕ್ತವನ್ನು ಕೃತಕವಾಗಿ ಸೃಷ್ಟಿಸಲು ಸಾಧ್ಯವಾಗಿಲ್ಲ.
ದಿನೇ ದಿನೇ ಹೆಚ್ಚುತ್ತಿರುವ ರಕ್ತದ ಬೇಡಿಕೆಗೆ ಪೂರಕವಾಗಿ ದಾನಿಗಳ ಸಂಖ್ಯೆ ಹೆಚ್ಚಬೇಕು. ಅಂತಾರಾಷ್ಟ್ರೀಯ ಲಯನ್ಸ್‌ಸಂಸ್ಥೆ ಈ ಹಂತದಲ್ಲಿ ತನ್ನದೇ ಆದ ಮಹತ್ವ ಪಡೆದಿದೆ ಎಂದು ತಿಳಿಸಿದರು.
ಲಯನ್ಸ್‌ಸಂಸ್ಥೆಯ ದೀಪಕ್‌ಸುಮನ್‌ಮಾತನಾಡಿ, ಯುವಜನತೆಯಲ್ಲಿ ರಕ್ತದಾನದ ಬಗ್ಗೆ ಜಾಗೃತಿ ಮೂಡುತ್ತಿರುವುದು ಆಶಾದಾಯಕ ಬೆಳವಣಿಗೆ, ಕಾಲೇಜುಗಳಲ್ಲಿ, ಸಂಘ-ಸಂಸ್ಥೆಗಳಲ್ಲಿ ಇಂತಹ ಶಿಬಿರಗಳು ನಡೆಯುವುದರಿಂದ ಹಲವರ ಜೀವರಕ್ಷಣೆಗೆ ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಲಯನ್ಸ್‌ಜಿಇಟಿ ಸಂಯೋಜಕ ಎಂ.ಆರ್.ಶ್ರೀನಿವಾಸ್, ಆರ್.ಎಲ್.ಜಾಲಪ್ಪ ಲಯನ್ಸ್‌ಕ್ಲಬ್‌ಅಧ್ಯಕ್ಷ ಜೆ.ಆರ್.ರಾಕೇಶ್, ಮಧುಮೇಹ ವಿಭಾಗದ ಜಿಲ್ಲಾ ಸಂಯೋಜಕ ಎಲ್.ಎನ್.ಪ್ರದೀಪ್‌ಕುಮಾರ್, ನಿಕಟಪೂರ್ವ ಅಧ್ಯಕ್ಷ ಡಾ.ಶ್ರೀನಿವಾಸರೆಡ್ಡಿ, ಉಪಾಧ್ಯಕ್ಷ ಪ್ರೊ.ಕೆ.ಆರ್.ರವಿಕಿರಣ್, ಕಾರ್ಯದರ್ಶಿ ಕೆ.ಸಿ.ನಾಗರಾಜ್,
ಖಜಾಂಚಿ ಎಸ್.ರವಿಕುಮಾರ್, ಮಾಜಿ ಕಾರ್ಯದರ್ಶಿ ಮುಕೇಶ್, ಅರುಂಧತಿ ರಾಕೇಶ್, ಡಾ.ಶಿವಪ್ರಸಾದ್, ಜಿಯಾವುಲ್ಲಾಖಾನ್, ವಸತಿ ಶಾಲೆ ಪ್ರಾಂಶುಪಾಲ ಧನಂಜಯ್, ಲಯನ್ಸ್‌ಕ್ಲಬ್ ಆಫ್ ಆರ್ಯಭಟ ಅಧ್ಯಕ್ಷ ಅಮಿತ್, ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳ ವಿವಿಧ ಶೈಕ್ಷಣಿಕ ಘಟಕಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ರಕ್ತದಾನಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.