ವಿದ್ಯಾರ್ಥಿಗಳಿಗೆ ಕಾನೂನಿನ ಅರಿವು ಬಹು ಮುಖ್ಯ-ಕ್ರಾಂತಿ ಕಿರಣ್

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ವಿದ್ಯಾರ್ಥಿಗಳಿಗೆ ಕಾನೂನಿನ ಅರಿವು ತಿಳುವಳಿಕೆ ಬಹಳ ಮುಖ್ಯ ಏಕೆಂದರೆ ಅಪರಾಧ ಚಟುವಟಿಕೆಗಳು ಹೆಚ್ಚಾಗಿ ಯುವಕರಲ್ಲಿ ವಿದ್ಯಾರ್ಥಿಗಳಲ್ಲಿ ಕಂಡುಬರುತ್ತದೆ ಕಾರಣ ಅವರಿಗೆ ಕಾನೂನಿನ ಅರಿವು ಇಲ್ಲದಿರುವುದು ಎಂದು ಪ್ರದಾನ ಸಿವಿಲ್ ನ್ಯಾಯದೀಶರಾದ ಡಿ. ಕ್ರಾಂತಿ ಕಿರಣ್ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಗ್ರಾಮಾಂತರ ಜಿಲ್ಲೆ, ತಾಲೂಕು ಕಾನೂನು ಸೇವಾಸಮಿತಿ ದೊಡ್ಡಬಳ್ಳಾಪುರ ಹಾಗೂ ಲಾವಣ್ಯ ವಿದ್ಯಾ ಸಂಸ್ಥೆ ಸಂಯುಕ್ತಆಶ್ರಯದಲ್ಲಿ ನಡೆದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳಲ್ಲಿ ಕಾನೂನು ಅರಿವು ಇಲ್ಲದಿರುವುದು ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗಿದೆ. ಜೊತೆಗೆ ಹೆಣ್ಣು ಭ್ರೂಣ ಹತ್ಯೆಗಳಿಂದ ಲಿಂಗ ತಾರತಮ್ಯ ಹೆಚ್ಚಾಗಿ ಕಂಡುಬರುತ್ತಿದೆ.

- Advertisement - 

ಅಪ್ರಾಪ್ತ ವಯಸ್ಸಿನ ಯುವಕ ಯುವತಿಯರು ಹೆಲ್ಮೆಟ್ ಧರಿಸದೆ ಬೈಕ್ ರೈಡ್ ಮಾಡುವುದು ವ್ಹಿಲಿಂಗ್ ಮಾಡುವುದು. ಇದರಿಂದಾಗಿ ಪ್ರಾಣಾಪಾಯ ಹೆಚ್ಚಾಗಿ ಸಂಭವಿಸುತ್ತವೆ. ಪರವಾನಗಿ  ಇಲ್ಲದೆ ಅಪಘಾತ ಮಾಡಿದರೆ ವಿಮೆ ದೊರೆಯುವುದಿಲ್ಲ.

ಇದರಿಂದ ಅಪಘಾತವಾಗಿ ಮೃತಪಟ್ಟ ಕುಟುಂಬಗಳಿಗೆ ಪರಿಹಾರವನ್ನು ಅವರೇ ಕೊಡಬೇಕು ಇದರಿಂದಾಗಿ ಎರಡು ಕುಟುಂಬಗಳು ನಾಶವಾಗುತ್ತವೆ.ಹೀಗಾಗಿ ಕಾನೂನು ಅರಿವು ಬಹಳ ಮುಖ್ಯ. ನಿಮಗೆ ಅನ್ಯಾಯವಾದಾಗ ಕಾನೂನು ಸೇವೆಗಳ ಪ್ರಾಧಿಕಾರ ಸಂಪರ್ಕಿಸಿದರೆ ಅಂತಹವರಿಗೆ ಉಚಿತವಾಗಿ ಕಾನೂನು ಸೇವೆಗಳನ್ನು ಒದಗಿಸುವುದೆ  ಕಾನೂನು ಸೇವೆಗಳ ಪ್ರಾಧಿಕಾರದ ಕರ್ತವ್ಯವಾಗಿದೆ ಎಂದು ಹೇಳಿದರು.

- Advertisement - 

 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ವಿಶ್ವಾಸ್ ಹನುಮಂತೇಗೌಡ ರವರು ಮಾತನಾಡಿ ಯುವಕರು ಯುವತಿಯರು ಅಪರಾಧ ಚಟುವಟಿಕೆಗಳಿಂದ ಆದಷ್ಟು ದೂರವಿರಿ ಅಂತಹಾ ಕೃತ್ಯ ಕಂಡು ಬಂದರೆ ತಕ್ಷಣ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಎಂದು ಹೇಳಿದರು.

ಪದವಿ ಪೂರ್ವ ಕಾಲೇಜು ಮತ್ತು ಪದವಿ ಕಾಲೇಜು ಪ್ರಾಂಶುಪಾಲರಾದ ಎಂ. ಸಿ. ಮಂಜುನಾಥ್ ಪ್ರಾಸ್ತಾವಿಕ ಮಾತನಾಡಿದರು.

ಕಾರ್ಯಕ್ರಮದಲ್ಲಿ ಬಿಎಡ್ ಕಾಲೇಜು ಪ್ರಾಂಶುಪಾಲ ಪ್ರೊ, ಜಿ.ಕೃಷ್ಣಮೂರ್ತಿ ಉಪನ್ಯಾಸಕರಾದ ಲತಾ ಮಹಾದೇವ್ ಎನ್ ರಶ್ಮಿ ಹರ್ಷಿತಾ ಜಿ ಅನು ಗಂಗಮೂರ್ತಿ ರಾಕೇಶ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.

 

 

 

Share This Article
error: Content is protected !!
";