ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ “ಕೊಡವ ಕಥೆ ಜೊಪ್ಪೆ”ಯನ್ನು ಹೊರತರಲು ಸೂಕ್ತ ಕತೆಗಳನ್ನು ಆಹ್ವಾನಿಸಿದೆ. ಸುಮಾರು 25 ರಿಂದ 30ರಷ್ಟು ಕತೆಗಳನ್ನು ಒಂದೇ ಪುಸ್ತಕದಲ್ಲಿ ಪ್ರಕಟಿಸಲಾಗುವುದು. ಕತೆಗಳನ್ನು ಎ 4 ಅಳತೆಯ ಕಾಗದದಲ್ಲಿ ಸ್ಪುಟವಾಗಿ ಬರೆದಿದ್ದು 5-6 ಪುಠಗಳನ್ನು ಮೀರುವಂತಿಲ್ಲ. ಕಥಾವಸ್ತು ಕಥೆಗಾರರ ಕಲ್ಪನೆಗೆ ಬಿಟ್ಟಿದ್ದು. ಕತೆಗಳು ಪ್ರತ್ಯಕ್ಷ-ಪರೋಕ್ಷವಾಗಿ ಯಾರದ್ದು ತೇಜೋವಧೆಯಾಗಲಿ, ಜಾತಿ-ಧರ್ಮಗಳ ಭಾವನೆಗಳಿಗೆ ಘಾಸಿ ಉಂಟು ಮಾಡುವುದಾಗಿರಬಾರದು. ಅಂತಿದ್ದಲ್ಲಿ ಅದರ ಸಾಧಕ-ಭಾದಕಗಳಿಗೆ ಕಥೆಗಾರರೇ ಭಾದ್ಯಸ್ಥರಾಗುವುದು.
ಕಥೆಗಳು ಸಾಧ್ಯವಾದಷ್ಟು ಕೊಡವ ಸಂಸ್ಕøತಿ-ಪದ್ಧತಿ, ಮೂಲತನಕ್ಕೆ ಒತ್ತುಕೊಡುವಂತಿದ್ದು ಸಾರ್ವಕಾಲಿಕವಾಗಿರಲಿ. ಪ್ರಕಟಿತ ಕಥೆಗಳಿಗೆ ಅಕಾಡೆಮಿ ಗೊತ್ತು ಪಡಿಸಿರುವಂತೆ ಸಂಭಾವನೆ ನೀಡಲಾಗುವುದು. ಕಥೆಗಾರರು ತಮ್ಮ ಸ್ವಪರಿಚಯವನ್ನು 4-5 ವಾಕ್ಯಗಳಿಗೆ ವೀರದಂತೆ ಬರೆದು ಕೊಡುವುದು. ಪ್ರತಿಯೊಬ್ಬ ಕಥೆಗಾರರು ತಮ್ಮ ಇತ್ತೀಚಿನ ಭಾವಚಿತ್ರದೊಂದಿಗೆ ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಲಗತ್ತಿಸುವುದು.
ಕಥೆಗಳನ್ನು ಕಳುಹಿಸಿಕೊಡಲು 2025 ಡಿಸೆಂಬರ್ 05 ರಂದು ಅಂತಿಮ ದಿನಾಂಕವಾಗಿದೆ. ಕಥೆಯನ್ನು ಪ್ರಕಟಿಸುವ ಅಂತಿಮ ತೀರ್ಮಾನ ಅಕಾಡೆಮಿಯದ್ದಾಗಿರುತ್ತದೆ. ಕೊಡವ ಕಥೆ ಜೊಪ್ಪೆಗೆ ನಿಮ್ಮ ಕಥೆಗಳನ್ನು
ಅಧ್ಯಕ್ಷರು / ರಿಜಿಸ್ಟ್ರಾರ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಜೂನಿಯರ್ ಕಾಲೇಜು ರಸ್ತೆ, ಸ್ಕೌಟ್ಸ್ ಭವನ, ಮ್ಯಾನ್ಸ್ ಕಾಂಪೌಂಡ್, ಮಡಿಕೇರಿ ಈ ವಿಳಾಸಕ್ಕೆ ಕಳುಹಿಸಬಹುದು ಎಂದು ಪ್ರಕಟಣೆ ತಿಳಿಸಿದೆ.