ಕೆಓಎಫ್ ಚಿತ್ರದುರ್ಗ ಒಕ್ಕೂಟದ ಸದಸ್ಯರ ಸಾಮಾನ್ಯ ಸಭೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕೆ.ಓ.ಎಫ್-ಚಿತ್ರದುರ್ಗಒಕ್ಕೂಟದ 35ನೇ ವರ್ಷದ ಸರ್ವ ಸಧಸ್ಯರ ಸಾಮಾನ್ಯ ಮಹಾಸಭೆಯು ಈಚೆಗೆ ಚಿತ್ರದುರ್ಗ ನಗರದ ಕೈಗಾರಿಕಾ ಪ್ರದೇಶದಲ್ಲಿರುವ ಒಕ್ಕೂಟದ ಕೇಂದ್ರ ಕಚೇರಿಯಲ್ಲಿ ನಡೆಯಿತು.

ಹಿರಿಯ ಸಹಕಾರಿ, ಮಾಜಿ ಸಚಿವರು ಹಾಗೂ ಕೆಓಎಫ್ ಅಧ್ಯಕ್ಷ ವೆಂಕಟರಾವ್  ನಾಡಗೌಡರು ಸಭೆ ಉದ್ದೇಶಿಸಿ, ಎಣ್ಣೆಬೀಜ ಬೆಳೆಯುವ ರೈತರಿಗೆ ಸಹಕಾರ ತತ್ವದ ಆದಾರದಲ್ಲಿ ಪ್ರಾಥಮಿಕ ಎಣ್ಣೆಬೀಜ ಸಹಕಾರ ಸಂಘಗಳ ಮತ್ತು ರೈತರ ಸರ್ವತೋಮುಖ ಅಭಿವೃದ್ದಿಯ ಬಗ್ಗೆ ಮಾರ್ಗದರ್ಶನ ನೀಡಿದರು.  

- Advertisement - 

ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ ಮಾತನಾಡಿ, ಎಣ್ಣೆಕಾಳು ಬೆಳೆಯುವ ರೈತರಿಗೆ ಹೊಸ ಹೊಸ ತಳಿಗಳ ಶೇಂಗಾ, ಸೂರ್ಯಕಾಂತಿ, ಔಡಲ, ಹರಳು, ತೊಗರಿ, ಇತ್ಯಾದಿ ಬೀಜೋತ್ಪಾದನೆ ಮಾಡಿ ರೈತರು ಕೃಷಿಯಿಂದ ಹೇಗೆ ಲಾಭ ಪಡೆಯಬಹುದು ಎಂದು ವಿವರಿಸಿದರು.

ಕೆಓಎಫ್ ವ್ಯವಸ್ಥಾಪಕ ಡಾ.ಎಂ.ಜಯಕೃಷ್ಣ ಅವರು, ಒಕ್ಕೂಟದ ಕಾರ್ಯಕ್ರಮ, ಸಾಧನೆ, ವ್ಯವಹಾರ, ಮುಂದಿನ ಯೋಜನೆ, ಆರ್ಥಿಕ ತಖ್ತೆಗಳ ಬಗ್ಗೆ ವಿವರಿಸಿದರು.

- Advertisement - 

ಕೆಓಎಫ್ ಒಕ್ಕೂಟ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ನಿರ್ದೇಶಕರು ಸಭೆಯ ಎಲ್ಲಾ ಜವಾದ್ದಾರಿ ವಹಿಸಿಕೊಂಡು ಸಭೆಯು ಸುಸೂತ್ರವಾಗಿ ನಡೆಯಲು ಸಹಕಾರಿಯಾದರು. ಒಕ್ಕೂಟದ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಮತ್ತು ನೌಕರರು ಒಕ್ಕೂಟವನ್ನು ಮುಂದಿನ ದಿನಗಳಲ್ಲಿ ರಾಷ್ಠ್ರ ಮಟ್ಟದಲ್ಲಿಯೇ ಅತ್ಯುತ್ತಮ ಸಹಕಾರಿ ಸಂಸ್ಥೆಯಾಗಿ ರೈತರಿಗೆ ಮತ್ತು ಗ್ರಾಹಕರಿಗೆ ಅತ್ಯುತ್ತಮ ಸೇವೆ ಕೊಡುವ ವಾಗ್ದಾನ ಮಾಡಿದರು.

ರೈತರ ಉತ್ಪನ್ನಗಳಾದ ಸಫಲ್, ಸನ್‍ಗೋಲ್ಡ್ ಶ್ರೇಣಿಯ ಖಾಧ್ಯ ತೈಲಗಳು ಮತ್ತು ಕೃಷಿ ಉತ್ಪನ್ನಗಳನ್ನು ಖರೀದಿಸಿ ರೈತರಿಗೆ ಮತ್ತು ರೈತ ಸಹಕಾರಿ ಸಂಸ್ಥೆಗೆ ಗೌರವಕೊಡಬೇಕೆಂದು ಕೆ.ಓ.ಎಫ್-ಚಿತ್ರದುರ್ಗದ ಆಡಳಿತ ಮಂಡಳಿಯು ಮನವಿ ಮಾಡಿತು.

ಚಿತ್ರದುರ್ಗ ಕೆಒಎಫ್ ಒಕ್ಕೂಟದ ಅಧ್ಯಕ್ಷ ಜಿ.ವಿ.ಉದಯಕುಮಾರ್, ರಾಯಚೂರು ಕೆಒಎಫ್ ಅಧ್ಯಕ್ಷ ಸುರೇಶ ರೆಡ್ಡಿ, ಹುಬ್ಬಳ್ಳಿ ಕೆಒಎಫ್ ನಿರ್ದೇಶಕ ಬಿ.ಟಿ.ಬೆನಕಟ್ಟೆ ಸೇರಿದಂತೆ ಮತ್ತಿತರರು ಇದ್ದರು.

 

 

Share This Article
error: Content is protected !!
";