ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಬುರುಜನಹಟ್ಟಿ ರಸ್ತೆ ಕೋಣನಹಟ್ಟಿಯಲ್ಲಿರುವ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ರಾಮನವಮಿಯ ಮರುದಿನ ಶನಿವಾರ ಆಂಜನೇಯಸ್ವಾಮಿಗೆ ೩೫ ನೇ ವರ್ಷದ ಪೂಜಾ ಮಹೋತ್ಸವದ ಪ್ರಯುಕ್ತ ವಿಶೇಷವಾಗಿ ಅಲಂಕರಿಸಿ ಪೂಜಿಸಲಾಯಿತು.
ಬಗೆ ಬಗೆಯ ಹೂವು, ಹಾರ ಹಾಗೂ ಬೆಳ್ಳಿಯ ಆಭರಣಗಳಿಂದ ಆಂಜನೇಯಸ್ವಾಮಿಯನ್ನು ಸಿಂಗರಿಸಿ ಮಹಿಳೆಯರು ಗಂಗೆಯನ್ನು ಹೊತ್ತು ತಂದ ನಂತರ ಶ್ರದ್ದಾಭಕ್ತಿಯಿಂದ ಪೂಜಿಸಲಾಯಿತು.
ಮಹಾ ಮಂಗಳಾರತಿ ನಂತರ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸಹಸ್ರಾರು ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಡಿ.ಬಿ.ನರಸಿಂಹಪ್ಪ, ಜಯಣ್ಣ, ಡಿ.ಬಿ.ಗೋವಿಂದಪ್ಪ, ಆರ್.ಸತ್ಯಣ್ಣ, ವೇದಣ್ಣ, ಶ್ರೀನಿವಾಸ್, ಯೋಗೇಶ್‌ಕುಮಾರ್, ಚಂದ್ರಶೇಖರ್, ರಮೇಶ್, ಕೃಷ್ಣಮೂರ್ತಿ, ಶ್ರೀಧರ್, ಎಲ್.ರಮೇಶ್, ರಂಗನಾಥ್, ಅಂಬರೀಶ್ ಹಾಗೂ ಭಕ್ತ ಮಂಡಳಿಯವರು ಪೂಜೆಯಲ್ಲಿ ಭಾಗವಹಿಸಿದ್ದರು.

