ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ೪೨ನೇ ಕರ್ನಾಟಕ ರಾಜ್ಯ ಟೇಕ್ವಾಂಡೋ ಚಾಂಪಿಯನ್‌ಶಿಪ್ ೨೦೨೫ರ ಸ್ಪರ್ಧೆಯಲ್ಲಿ ಚಿತ್ರದುರ್ಗದ ಮುರುಘರಾಜೇಂದ್ರ ಕ್ರೀಡಾಂಗಣದ (ವಿಜ್ಞಾನ ಕಾಲೇಜು ಮೈದಾನ) ಚಿತ್ರದುರ್ಗದ ಟೇಕ್ವಾಂಡೋ ಅಮೆಚೂರ್ ಸೆಂಟರ್‌ನ ವಿದ್ಯಾರ್ಥಿಗಳು ಸೀನಿಯರ್, ಕೆಡೆಟ್, ಜೂನಿಯರ್, ಸಬ್-ಜೂನಿಯರ್ ಮತ್ತು ಜಿ ೪ ವಿಭಾಗಗಳಲ್ಲಿ ಭಾಗವಹಿಸಿ ೧೧ ಪದಕಗಳನ್ನು ಗೆದ್ದಿದ್ದಾರೆ.
ಅಧಿಕೃತ ಆಟಗಳಾದ ಸ್ಪರ್ಧೆಗಳಲ್ಲಿ ಆರ್.ಮೋಹಿತ್-ಕಂಚಿನ ಪದಕ, ಎಸ್‌ಎಸ್.ರೋಹಿತ್ ಕಂಚಿನ ಪದಕ ಪಡೆದಿದ್ದು ಹಾಗೂ ಜಿ ೪ ವಿಭಾಗದ ಪದ್ಯಗಳಲ್ಲಿ ಜಿ. ಪ್ರನೀಲ್ ಚಿನ್ನದ ಪದಕ, ಆರ್.ದೀಕ್ಷಿತ್ ಚಿನ್ನದ ಪದಕ, ಎನ್. ಲಕ್ಷ್ಮಿನಾರಾಯಣ್ ಚಿನ್ನದ ಪದಕ, ಆರ್. ಮೋಹಿತ್ ಚಿನ್ನದ ಪದಕ, ಎನ್. ಲೋಹಿತ್ ಬೆಳ್ಳಿ ಪದಕ, ಎಸ್.ಎಸ್. ರೋಹಿತ್ ಬೆಳ್ಳಿ ಪದಕ, ಎನ್. ಹೃದಯ್ ಬೆಳ್ಳಿ ಪದಕ, ಎಸ್.ಎಸ್. ಪದ್ಮಾವತಿ ಕಂಚಿನ ಪದಕ, ಎಂ.ರಿಷಿಕ್ ಕಂಚಿನ ಪದಕ ಪಡೆದಿದ್ದು ಚಿತ್ರದುರ್ಗ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.
ಅಟಗಾರರ ಉತ್ತಮ ಪ್ರದರ್ಶನ ನೀಡಲು ತರಬೇತುದಾರರದ ರಂಗನಾಥ್ ಕೆ, ಪೂಜಿತಾ ಎಂ, ಮಾರುತಿ ಕೆ. – ಹಲವು ತಿಂಗಳು ಪರಿಶ್ರಮದಿಂದ ತರಬೇತಿ ನೀಡಿ ಮಕ್ಕಳಿಂದ ಗುಣಮಟ್ಟ ಆಟ ಆಡಿಸಿದ್ದಾರೆ. ಎಲ್ಲಾ ವಿಜೇತರಿಗೆ ಗಣ್ಯರು ಅಭಿನಂದಿಸಿದ್ದಾರೆ.