ಚಂದ್ರವಳ್ಳಿ ನ್ಯೂಸ್, ಕೊಟ್ಟೂರು:
ಕೊಟ್ಟೂರು ಪಟ್ಟಣದ ಆರಾಧ್ಯ ದೈವ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶನಿವಾರ ಸಂಜೆ 5:30ಕ್ಕೆ ಸಡಗರ ಸಂಭ್ರಮದಿಂದ ನೆರವೇರಿತು.
ದೇವಸ್ಥಾನದಿಂದ ಉಸ್ತವ ಮೂರ್ತಿ ಪಲ್ಲಕ್ಕಿಯ ಮೂಲಕ ಸಕಲ ವಾದ್ಯಗಳೊಂದಿಗೆ ರಥದ ಬಳಿಗೆ ತಂದು ಮೂರು ಸುತ್ತು ಪ್ರದಕ್ಷಣ ಹಾಕಲಾಯಿತು.
ನಂತರ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ಎಳೆಯುತ್ತಿದ್ದಂತೆ ನೆರೆದಿದ್ದ ಭಕ್ತರು ಜಯ ಪೋಷ ಕೂಗಿದರು. ರಥಕ್ಕೆ ಉತ್ತುತ್ತಿ, ಬಾಳೆಹಣ್ಣು, ಚೂರು ಮೆಣಸು ತೋರಿ ಭಕ್ತಿ ಸಮರ್ಪಿಸಿದರು.
ರಥವನ್ನು ಪಾದಗಟ್ಟೆಯವರಿಗೆ ಎಳೆದು ನಂತರ ಮೂಲ ಸ್ಥಳಕ್ಕೆ ತರಲಾಯಿತು. ರಥೋತ್ಸವದಲ್ಲಿ ನಂದಿಧ್ವಜ ಕುಣಿತ, ಸಮನ, ಅಲ್ಲಿಗೆ ಉರಮೆ. ಮೇಸೇರಿ. ಜನಪದ ವಾದ್ಯಗಳು ಮೆರುಗು ಹೆಚ್ಚಿಸಿದವು. ರಥೋತ್ಸವಕ್ಕೂ ಮುನ್ನ ದೇವಸ್ಥಾನದಲ್ಲಿ ಬೆಳಗ್ಗೆಯಿಂದ ಗ್ರಾಮಸ್ಥರು ಹಾಗೂ ಭಕ್ತಾದಿಗಳ ಸಮ್ಮುಖದಲ್ಲಿ ಸ್ವಾಮಿಗೆ ವಿಶೇಷ ಧಾರ್ಮಿಕ ಪೂಜೆ ಕಾರ್ಯಕ್ರಮಗಳು ಜರುಗಿದವು.