ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಸ್ವ ಪಕ್ಷದಲ್ಲಿಯೇ ಮರ್ಯಾದೆ ಇಲ್ಲದಂತಾಗಿದೆ. ಅವರ ಸಿಎಂಆಗುವ ಹಗಲು ಕನಸಿನ ಆಸೆಗೆ ಸಿದ್ದರಾಮಯ್ಯ ಅವರುಈಗಾಗಲೇ ತಣ್ಣೀರು ಎರಚಿದ್ದಾರೆ.
ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೆಪಿಸಿಸಿ ಅಧ್ಯಕ್ಷ ಹುದ್ದೆಯಿಂದ ಡಿಕೆಶಿಯನ್ನು ಜಾರಿಸಲು ತಯಾರಿ ಆರಂಭಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಸಿದ್ದರಾಮಯ್ಯ ಬಣದ ಸಚಿವರು ಔತಣಕೂಟದ ನೆಪದಲ್ಲಿ ಒಟ್ಟು ಸೇರಿ ಡಿಕೆಶಿ ವಿರುದ್ಧ ಮಸಲತ್ತು ಆರಂಭಿಸಿದ್ದು, ಇದರ ಮೊದಲ ಫಲಿತಾಂಶ ಇದಾಗಿದೆ.
ಬಂಡೆಯನ್ನು ಪುಡಿಗಟ್ಟುವ ಸಿದ್ದರಾಮಯ್ಯ ಅವರ ಆಸೆಗೆ ಸಹಕಾರ ಸಚಿವರು ಪೂರ್ಣ ಸಹಕಾರ ನೀಡಿದ್ದು, ಸಚಿವ ಕೆ. ಎನ್. ರಾಜಣ್ಣ ಮೂಲಕಚೆಕ್ ಮೇಟ್ ಇಟ್ಟಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.