ಚಂದ್ರವಳ್ಳಿ ನ್ಯೂಸ್, ಹಿರಿಯೂರು :
ನಗರದ ರೋಟರಿ ಹಾಗೂ ರೆಡ್ ಕ್ರಾಸ್ ಸಂಸ್ಥೆಗಳು ಹಲವಾರು ವರ್ಷಗಳಿಂದ ಸಮಾಜ ಮುಖಿಯಾಗಿ ಸಾಮಾಜಿಕ ಸೇವಾ ಕಾರ್ಯಗಳ ಮಾಡುತ್ತಾ ಬಂದಿದ್ದು, ಯಾವುದೇ ಸೇವಾ ಸಂಘ ಸಂಸ್ಥೆಗಳು ಸಮಾಜಮುಖಿ ಕಾರ್ಯಕ್ರಮ ನಡೆಸಲು ಎಲ್ಲರ ಸಹಕಾರ ಅಗತ್ಯ ಎಂದು ರೋಟರಿ ಸಂಸ್ಥೆಯ ಭವಿಷ್ಯದ ಅಧ್ಯಕ್ಷ ಕೆ.ಆರ್.ವರುಣ್ ಹೇಳಿದರು.
ನಗರದ ಗಂಟಲು ಮಾರಮ್ಮ ದೇವಸ್ಥಾನದ ಆವರಣದಲ್ಲಿ ರೋಟರಿ ಹಾಗೂ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರೆಡ್ ಕ್ರಾಸ್ ಚೇರ್ಮನ್ ಹೆಚ್.ಎಸ್. ಸುಂದರ್ ರಾಜ್ ಮಾತನಾಡಿ, ಮನುಕುಲಕ್ಕೆ ಗಾಳಿ, ಬೆಳಕು, ನೀರು, ಹೆಚ್ಚು ಅಗತ್ಯವಿದೆ, ಪ್ರಾಣಿ ಪಕ್ಷಿ ಮನುಕುಲದ ಆರೋಗ್ಯ ಸಂರಕ್ಷಣೆಗಾಗಿ ಹೆಚ್ಚುಹೆಚ್ಚು ಗಿಡಮರಗಳನ್ನು ಬೆಳೆಸಬೇಕಾಗಿರುವುದು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಸಮಾಜದ ಪ್ರತಿಯೊಬ್ಬರೂ ಹೆಚ್ಚು ಹೆಚ್ಚು ಸಸಿಗಳನ್ನು ನೆಡಲು ಮುಂದಾಗಬೇಕು ಎಂದು ಹೇಳಿದರು.
ರೆಡ್ ಕ್ರಾಸ್ ಸಂಸ್ಥೆ ಉಪಾಧ್ಯಕ್ಷ ಬಿ.ಕೆ.ನಾಗಣ್ಣ, ವೈಸ್ ಚೇರ್ಮನ್ ಎ.ರಾಘವೇಂದ್ರ, ನೂತನ ರೋಟರಿ ಕಾರ್ಯದರ್ಶಿಯಾಗುತ್ತಿರುವ ವಿಕಾಸ್ ಜೈನ್, ವಿಶಾಲ್ ಬಾಪ್ನ, ಅನಿಲ್ ಕುಮಾರ್, ಕಿರಣ್, ಎಂ.ವಿ.ಹರ್ಷ, ಚಂದ್ರಹಾಸ್, ವಿಶ್ವನಾಥ್, ರಾಘವೇಂದ್ರ ಆಚಾರ್, ಚಂದ್ರಕೀರ್ತಿ ಗುಜ್ಜಾರ್, ಎಚ್.ಡಿ ವಸಂತ್, ಹೆಚ್.ವೆಂಕಟೇಶ್ ಸಣ್ಣ ಭೀಮಣ್ಣ, ಕೆ.ಎಸ್.ಮಹಾಬಲೇಶ್ವರಶೆಟ್ಟಿ, ಪಿ.ಆರ್.ಸತೀಶ್ ಬಾಬು, ಎಸ್.ಜೋಗಪ್ಪ, ಎಚ್.ಎಸ್.ರಾಧಾಕೃಷ್ಣ ಸೇರಿದಂತೆ ಅನೇಕ ಉಪಸ್ಥಿತರಿದ್ದರು.