ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳಿಂದ ದೊಡ್ಡಬಳ್ಳಾಪುರ ತಾಲೂಕು ಪಾಲ್ ಪಾಲ್ ಗ್ರಾಮದಲ್ಲಿ ಕೃಷಿ ಬೃಂದಾವನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಕೃಷಿ ವಸ್ತು ಪ್ರದರ್ಶನ, ಬೆಳೆ ಕ್ಷೇತ್ರೋತ್ಸವ, ತಂತ್ರಜ್ಞಾನ, ತಾಂತ್ರಿಕ ಪ್ರಾತ್ಯ ಕ್ಷಿಕೆ ಬಗ್ಗೆ ಮಾಹಿತಿ ನೀಡಲಾಗಿದ್ದು, ರೈತ ಹಾಗೂ ಕೃಷಿ ವಿಜ್ಞಾನಿಗಳಿಂದ ಸಂವಾದ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವಿಜ್ಞಾನಿ ಹಾಗೂ ಸಸ್ಯ ರೋಗ ಶಾಸ್ತ್ರ ವಿಭಾಗದ ಲಕ್ಷ್ಮಿ ನಾರಾಯಣ್ ರೆಡ್ಡಿ, ಸೂಕ್ಷ್ಮ ಜೀವಾಣು ವಿಭಾಗದ ಲಕ್ಷ್ಮೀಪತಿ, ಡಾ, ಹನುಮಂತರಾಯ, ಎಸ್. ಎಸ್. ಘಾಟಿ ಪಂಚಾಯ್ತಿ ಸದಸ್ಯರಾದ ವಾಸುದೇವ,
ಅಪ್ಪಯ್ಯಪ್ಪ, ವೆಂಕಟೇಶ್, ತೂಬಗೆರೆ ಪಂಚಾಯ್ತಿ ಸದಸ್ಯ ಕೃಷ್ಣಪ್ಪ, ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಮುನಿರಾಜು, ಹಳ್ಳಿಕಾರ್ ಅಂಬರೀಷ್, ರೈತ ಮುಖಂಡರಾದ ನರಸಿಂಹ ಗೌಡ, ಎಲ್ಲಪ್ಪ, ರುದ್ರಪ್ಪಯ್ಯ ಭಾಗವಹಿಸಿದ್ದರು.