ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಳಿಂಗ ನರ್ತನ
ಕೃಷ್ಣ
ನೃತ್ಯ
ಮಾಡಿದನು
ಬಾಲ ಕೃಷ್ಣ
ಕಾಳಿಂಗ ಮರ್ದನದಲಿ
ಭಗವಂತರು
ನುಡಿಸಿದ ರಾಗ
ತಾಳದ ಝೇಂಕಾರದಲಿ
ಯಮುನೆಯೂ
ನಲಿಯುತಲಿ ನಾದ ಲಯಕೆ
ನುಲಿದಳು
ತಟದಲ್ಲಿ ನಿಂತ
ನಂದಗೋಕುಲದ
ನಿವಾಸಿಗಳು ಮತ್ತು
ಹಿಡಿದವರಂತೆ
ಕೃಷ್ಣ ಲೀಲೆಗೆ
ತಲೆ ದೂಗಿದರು
ಗೋಪಿಕೆಯರು
ಕೃಷ್ಣನ ಕೊಳಲ
ನಾಡಕೆ ಮನ ಸೋತು
ಮೈ ಮರೆತರು
ಕಾಳಿಂಗ ಮರ್ಧನದ
ಲೀಲೆಗೆ ಹಾಕಿದರು
ಜೈಕಾರ
ರಚನೆ:ಗುರಾನಿ ದಾವಣಗರೆ 9036389240