ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷರಾಗಿ ಕೃಷ್ಣಪ್ಪ ಆಯ್ಕೆ 

News Desk

ಚಂದ್ರವಳ್ಳಿ ನ್ಯೂಸ್, ಜಗಳೂರು :
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಜಗಳೂರು ತಾಲೂಕು ಘಟಕಕ್ಕೆ
2024-2029 ಅವಧಿಗೆ ನ್ಯಾಯಾಂಗ ಇಲಾಖೆಯ ನೌಕರರು ಹಾಗೂ ನಿರ್ದೇಶಕರು ಆದ ಸಿ. ಕೃಷ್ಣಪ್ಪ ಇವರನ್ನ ಉಪಾಧ್ಯಕ್ಷರಾಗಿ ಸರ್ವನುಮತದಿಂದ ಆಯ್ಕೆ ಮಾಡಲಾಗಿದೆ.

ಈ ಹಿಂದೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕ್ರೀಡಾ ಕಾರ್ಯದರ್ಶಿಯಾಗಿ ಕೆಲಸ ಮಾಡಿದ ಅನುಭವ ಹೊಂದಿದ ಶ್ರೀ ಕೃಷ್ಣಪ್ಪ ಇವರನ್ನು ಜಗಳೂರು ತಾಲೂಕು ಅಧ್ಯಕ್ಷರಾದ ಎ. ಎಲ್. ತಿಪ್ಪೇಸ್ವಾಮಿ ಇವರು ಅಭಿನಂದಿಸಿ ಪ್ರಮಾಣ ಪತ್ರ ವಿತರಿಸಿದರು.

ಈ ಸಂದರ್ಭದಲ್ಲಿ ನೌಕರರ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಡಾ. ಉಮೇಶ್ ಬಾಬು ಮಠದ್ (ಉಬಾಮ) ಸಾಹಿತಿಗಳು ಹಾಜರಿದ್ದರು.

 ಕೃಷ್ಣಪ್ಪ ಇವರು ಉಪಾಧ್ಯಕ್ಷರಾಗಿ ಆಯ್ಕೆಗೊಂದಿದ್ದರಿಂದ ಮನೋಹರ್, ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆ ನೌಕರರ ಸಂಘದ ರಾಜ್ಯ ನಿರ್ದೇಶಕರು, ಜಗಳೂರು ನ್ಯಾಯಾಲಯದ ಶಿರೆಸ್ಥೆದಾರದ ಜೈರಾಮ್, ಅಶೋಕ್ ಹುಚ್ಚಮ್ಮನವರು, ದೇವರಾಜ್, ರೋಜಿ, ಆಶಾ, ನಿಜಗುಣ, ಜನಾರ್ಧನ್, ಉದಯಕುಮಾರ್, ಕೊಟ್ರೇಶ್, ನಾಗಣ್ಣ, ಹಿರಿಯ ಬೇಲಿಪರಾದ ಬಿ. ಎಸ್. ಬಸಪ್ಪಾಜಿ, ಯಾಸ್ಮಿನ್ ತಾಜ್, ಇಕ್ಬಾಲ್ ಆಹ್ಮದ್, ಮಾರುತಿ ಎಸ್ ಕರಡಿ, ನಸ್ರಿನ್ ತಾಜ್, ಪ್ರತಿಭಾ, ಗೋಪಾಲಕೃಷ್ಣ, ವಿಜಯ್ ಅಕ್ಕಿ, ಇಂಡಿ, ಸ್ನೇಹಿತರಾದ ಗಟ್ಟಿ ಶ್ರೀನಿವಾಸ್, ವೆಂಕಟೇಶ್, ಕಪಿನಿಗೌಡ, ಷಣ್ಮುಖಪ್ಪ, ಸೋಮಶೇಖರ್ ಮುಂತಾದವರು ಅಭಿನಂದಿಸಿ ಶುಭ ಹಾರೈಸಿದ್ದಾರೆ.

 

- Advertisement -  - Advertisement - 
Share This Article
error: Content is protected !!
";