ಕೆ.ಎಸ್.ಆರ್.ಟಿ.ಸಿ ಬಸ್ ಟೈರ್ ಸ್ಫೋಟ ತಪ್ಪಿದ ಬಾರಿ ಅನಾಹುತ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ರಾಷ್ಟ್ರೀಯ ಹೆದ್ದಾರಿ
648ರಲ್ಲಿ ಕೆಎಸ್ ಆರ್ ಟಿಸಿ ಬಸ್ ಟೈರ್ ಸ್ಫೋಟಗೊಂಡು, ನಿಯಂತ್ರಣ ತಪ್ಪಿದ ಬಸ್ ರಸ್ತೆಯ ತಡೆಗೋಡೆಗೆ ಗುದ್ದಿದೆ. ಬಸ್ನಲ್ಲಿ 30ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದೂ ಚಾಲಕನ ಸಮಯ ಪ್ರಜ್ಞೆಯಿಂದ ಸದ್ಯ ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿದ್ದಾರೆ.

  ದೊಡ್ಡಬಳ್ಳಾಪುರ ತಾಲೂಕಿನ ಮೆಣಸಿ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ಸಂಭವಿಸಿದ್ದು, ಸೂಲಿಕುಂಟೆ-ದೊಡ್ಡಬಳ್ಳಾಪುರ ಮಾರ್ಗದ ಬಸ್ ದೊಡ್ಡಬಳ್ಳಾಪುರ ನಗರಕ್ಕೆ ಬರುವ ವೇಳೆ ಈ ಅವಘಡ ಸಂಭವಿಸಿದ್ದು ಚಾಲಕ ಮುನಿಶ್ಯಾಮಪ್ಪ ರವರ ಸಮಯ ಪ್ರಜ್ಞೆಯಿಂದ ಬಸ್ಸಿನಲ್ಲಿದ್ದ 30ಕ್ಕೂ ಹೆಚ್ಚು ಪ್ರಯಾಣಿಕರ ಪ್ರಾಣ ಉಳಿದಿದೆ. 

ಈ ಕುರಿತು ಸ್ಥಳೀಯ ಕೆಸ್ತೂರು ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ್ ಮಾತನಾಡಿ ಈ ಅಪಘಾತಗಳಿಗೆ ಟೋಲ್ ಸಿಬ್ಬಂದಿ ಹಾಗೂ ರಾಷ್ಟೀಯ ಹೆದ್ದಾರಿ ಪ್ರಾಧಿಕಾರವೇ ಹೊಣೆಯಾಗುತ್ತದೆ. ಕಾರಣ ಸ್ಥಳೀಯವಾಗಿ ಭೂಮಿಯಿದ್ದರು ಸರ್ವಿಸ್ ರಸ್ತೆ ನಿರ್ಮಾಣ ಮಾಡಲು ಮೀನಾ- ಮೇಷ  ಎನಿಸುತ್ತಿದೆ. ಈ ಕುರಿತು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯಾಜನವಾಗಿಲ್ಲ. ಇನ್ನಾದರೂ ರಸ್ತೆ ಪ್ರಾಧಿಕಾರ ಎಚ್ಚೆತ್ತುಕೊಂಡು ಸರ್ವಿಸ್ ರಸ್ತೆ ಹಾಗೂ ಮೇಲ್ಸೇತುವೆ ನಿರ್ಮಿಸಿ ಸಾರ್ವಜನಿಕರ ಜೀವ ಉಳಿಸಬೇಕಿದೆ ಇಲ್ಲವಾದಲ್ಲಿ ಹೈವೇ ಬಂದ್ ಮಾಡುವ ಮೂಲಕ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದರು.

ಗ್ರಾಮದ ಅನ್ನಪೂರ್ಣ ಮಾತನಾಡಿ ಈ ರಸ್ತೆ ನಿರ್ಮಾಣವಾದ ಸಂದರ್ಭದಿಂದಲೂ ನಿರಂತರ ಅಪಘಾತಗಳು ನೆಡೆಯುತ್ತಲೇ ಇವೆ ಆದರೂ ಸ್ಥಳೀಯ ಟೋಲ್ ಸಿಬ್ಬಂದಿಗಳು ಹಾಗೂ ಸಂಬಂಧಪಟ್ಟ ರಸ್ತೆ ಪ್ರಾಧಿಕಾರ ಯಾವುದೇ ಸಂಬಂಧವಿಲ್ಲದೇ ವರ್ತಿಸುತ್ತಿದೆ, ಕಳೆದೆ ಎರಡು ದಿನಗಳ ಹಿಂದೆ ನಾನು ಇದೆ ರಸ್ತೆಯಲ್ಲಿ ಅಪಘಾತಕ್ಕಿಡಾಗಿದ್ದು, ಈ ರಸ್ತೆಯಿಂದ ಸ್ಥಳೀಯ ಸುತ್ತ ಮುತ್ತಲಿನ ಹಲವು ಹಳ್ಳಿಗಳ ರೈತರು, ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದೇವೆ. ರಸ್ತೆ ಬಂದ್ ಮಾಡದೇ ನಮಗೆ ಬೇರೆ ದಾರಿ ಇಲ್ಲ, ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ನಮ್ಮ ಸಮಸ್ಯೆಗೆ ಶೀಘ್ರ ಪರಿಹಾರ ಕಲ್ಪಿಸಬೇಕಿದೆ ಎಂದು ಒತ್ತಾಯಿಸಿದರು.

KSRTC ಬಸ್ ಗಳ ಕಳಪೆ ಗುಣಮಟ್ಟದ ನಿರ್ವಹಣೆ ಅಪಘಾತಕ್ಕೆ ಕಾರಣವಾಯಿತೇ?
 ಹೌದು ಬಸ್ಸಿನ ಟೈರ್ ಗಳಲ್ಲಿ ಮರು ಬಳಕೆ ಮಾಡಿರುವ ಟೈರ್ ಗಳನ್ನು ಬಳಸಲಾಗುತ್ತದೆ ಇದೇ ಇಂದಿನ ಬಸ್ಸಿನ ಟೈರ್ ಸ್ಪೋಟಗೂಳ್ಳಲು ಕಾರಣ ಎಂಬುದು ಸ್ಥಳೀಯ ಪ್ರತ್ಯಕ್ಷದರ್ಶಿಗಳ ವಾದವಾಗಿದೆ. ಟೈರ್ ಸ್ಫೋಟಗೊಂಡ ತಕ್ಷಣವೇ ಚಾಲಕ ತಡೆಗೋಡೆಯ ಕಡೇ ಬಸ್ ಚಲಿಸಿದ್ದು , ತಡೆಗೋಡೆಯಿಂದ ಬಸ್ ನಿಯಂತ್ರಣಕ್ಕೆ ಬಂದಿದೆ, ಒಂದು ವೇಳೆ ತಡೆಗೋಡೆ ಇಲ್ಲದಿದ್ದಲ್ಲಿ ಬಸ್ ಹಳ್ಳಕ್ಕೆ ಬಿಳುತ್ತಿತ್ತು, ಚಾಲಕನ ಸಮಯ ಪ್ರಜ್ಞೆಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

 

Share This Article
error: Content is protected !!
";