ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಹಿಳಾ ಅಧಿಕಾರಿಯನ್ನು ತುಚ್ಛವಾಗಿ ನಿಂದಿಸಿದ ಭದ್ರಾವತಿ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ಅವರ ಪುತ್ರ ಬಸವೇಶ್ ಗೆ ಕ್ಷೀರಾಭಿಷೇಕ ನಡೆದಿದೆ ಎಂದು ಬಿಜೆಪಿ-ಜೆಡಿಎಸ್ ಪಕ್ಷಗಳು ಗಂಭೀರ ಆರೋಪ ಮಾಡಿವೆ.
ಮಹಿಳಾ ಅಧಿಕಾರಿ ದೂರು ನೀಡಿ ಒಂದು ವಾರ ಕಳೆದರೂ ಇದುವರೆಗೂ ಆರೋಪಿ ಬಸವೇಶ್ ಅನ್ನು ಬಂಧಿಸಿಲ್ಲ. ಸಿಎಂ ಸಿದ್ದರಾಮಯ್ಯ ಅವರೆ, ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರೆ, ಬಸವೇಶ್ ರನ್ನು ಬಂಧಿಸಿ ವಿಚಾರಣೆಗೊಳಪಡಿಸಲು ನಿಮಗೂ ಸಹ ಕ್ಷೀರಾಭಿಷೇಕ ಮಾಡಿಸಬೇಕೆ..!!?? ಎಂದು ವಿಪಕ್ಷಗಳು ಖಾರವಾಗಿ ಪ್ರಶ್ನಿಸಿವೆ.
ಕೂಡಲೇ ಬಸವೇಶ್ ರನ್ನು ಬಂಧಿಸಿ, ನೊಂದ ಮಹಿಳಾ ಅಧಿಕಾರಿಗೆ ನ್ಯಾಯ ನೀಡಿ ಎಂದು ವಿಪಕ್ಷಗಳು ಆಗ್ರಹ ಮಾಡಿವೆ.

