ಕೆಎಸ್‌ಆರ್‍ಟಿಸಿ ಚಾಲಕ ಮನೋಹರ್‍ಗೆ ಬೆಳ್ಳಿ ಪದಕ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಸತತ ಐದು ವರ್ಷಗಳ ಕಾಲ ಅಪಘಾತ ರಹಿತ ಹಾಗೂ ಅಪರಾಧ ರಹಿತ ಸೇವೆ ಸಲ್ಲಿಸಿದ ಚಿತ್ರದುರ್ಗ ಘಟಕದ ಚಾಲಕ ಆರ್.ಮನೋಹರ ಅವರಿಗೆ
ಬೆಳ್ಳಿ ಪದಕನೀಡಿ ಗೌರವಿಸಲಾಯಿತು.

ನಗರದ ಮುರುಘ ರಾಜೇಂದ್ರ ಕ್ರೀಡಾಂಗಣದಲ್ಲಿ ಸೋಮವಾರ ೭೭ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರು ಚಾಲಕ ಆರ್.ಮನೋಹರ್ ಅವರಿಗೆ ಬೆಳ್ಳಿ ಪದಕ ಪ್ರದಾನ ಮಾಡಿದರು.

- Advertisement - 

 ಕೆಎಸ್‌ಆರ್‍ಟಿಸಿ ಚಿತ್ರದುರ್ಗ ವಿಭಾಗದ ವತಿಯಿಂದ ನೀಡಲಾಗುವ ೨೦೨೨ನೇ ಸಾಲಿನ ಈ ಪ್ರಶಸ್ತಿಯು ಬೆಳ್ಳಿ ಪದಕ, ಪ್ರಶಂಸನಾ ಪತ್ರ ಹಾಗೂ ರೂ. ೨,೦೦೦ ನಗದು ಪುರಸ್ಕಾರ ನೀಡಲಾಯಿತು.

ಈ ಸಂದರ್ಭದಲ್ಲಿ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹಾಗೂ ಕರ್ನಾಟಕ ರಾಜ್ಯ ಸಾರಿಗೆ ನಿಗಮ ಚಿತ್ರದುರ್ಗ ವಿಭಾಗೀಯ ನಿಯಂತ್ರಣಾಧಿಕಾರಿ ವೆಂಕಟೇಶ್ ಸೇರಿದಂತೆ ಮತ್ತಿತರರು ಇದ್ದರು.

- Advertisement - 

 

Share This Article
error: Content is protected !!
";