ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ತನ್ನ ನವೀನ ತಂತ್ರಜ್ಞಾನದ ಸಾಧನೆಗಾಗಿ ಮತ್ತೊಂದು ರಾಷ್ಟ್ರೀಯ ಮನ್ನಣೆಯನ್ನು ಪಡೆದಿದೆ. ನವದೆಹಲಿಯ ನೆಹರು ಪ್ಲೇಸ್ನಲ್ಲಿರುವ ಹೋಟೆಲ್ ಎರೋಸ್ನಲ್ಲಿ 2026 ನೇ ಮಾರ್ಚ್ 11 ರಂದು ನಡೆದ ಸಮಾರಂಭದಲ್ಲಿ ನಿಗಮಕ್ಕೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಕೆಎಸ್ಆರ್ಟಿಸಿಯ ನಿರ್ದೇಶಕಿ (ಸಿ ಮತ್ತು ಜಾ) ಗಾಯಿತ್ರಿ ಕೆ. ಎಂ., ಅವರು, ‘ಉoveಡಿಟಿಚಿಟಿಛಿe ಓoತಿ‘ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಕೈಲಾಶ್ ಅಧಿಕಾರಿ ಮತ್ತು ಅಮಿತ್ ಸಾದ್ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.
ನಿಗಮದ ‘ಧ್ವನಿಸ್ಪಂದನ’ ಉಪಕ್ರಮಕ್ಕೆ ‘Excellence in Innovation’ (ನಾವೀನ್ಯತೆಯಲ್ಲಿ ಶ್ರೇಷ್ಠತೆ) ವಿಭಾಗದಲ್ಲಿ ಈ ಗೌರವ ಲಭಿಸಿದೆ.
ಮೈಸೂರು ನಗರ ಸಾರಿಗೆಯ 200 ಬಸ್ಸುಗಳಲ್ಲಿ ಜರ್ಮನಿಯ GiZ ಸಂಸ್ಥೆಯ ಸಹಯೋಗದೊಂದಿಗೆ ‘ಧ್ವನಿಸ್ಪಂದನ – ಆನ್ಬೋರ್ಡ್ ಬಸ್ ಐಡೆಂಟಿಫಿಕೇಶನ್ ಮತ್ತು ನ್ಯಾವಿಗೇಶನ್ ಸಿಸ್ಟಮ್’ ಅನ್ನು ಯಶಸ್ವಿಯಾಗಿ ಜಾರಿಗೆ ತರಲಾಗಿದೆ.
ಈ ಯೋಜನೆಯು ವಿಶೇಷವಾಗಿ ದೃಷ್ಟಿ ದಿವ್ಯಾಂಗ ಪ್ರಯಾಣಿಕರ ಪ್ರಯಾಣದ ಅವಲಂಬನೆಯನ್ನು ಕಡಿಮೆ ಮಾಡಿದೆ. ಇದು ಅವರ ಆತ್ಮವಿಶ್ವಾಸ, ಸುರಕ್ಷತೆ ಮತ್ತು ಸಂಚಾರದ ಸ್ವಾತಂತ್ರ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಮಂಡಳಿ ಕಾರ್ಯದರ್ಶಿ / ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

