ಕರವೇ ಕನ್ನಡಿಗರ ಬಣದಿಂದ ಎಸ್. ಎಂ. ಕೃಷ್ಣ ರವರಿಗೆ ನುಡಿ ನಮನ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಬಣದಿಂದ ಮೊನ್ನೆ ನಿಧನರಾದ ಹಿರಿಯ ರಾಜಕೀಯ ಮುತ್ಸದ್ದಿ ಹಾಗು ಕರ್ನಾಟಕ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣರವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. 

           ಕನ್ನಡ ಜಾಗೃತ ಭವನದ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್. ಎಂ. ಕೃಷ್ಣರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನುಡಿ ನಮನ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಕರವೇ ಕನ್ನಡಿಗರ ಬಣದ ಸ್ಥಾಪಕ ಅಧ್ಯಕ್ಷ ಬಿ. ಎಸ್. ಚಂದ್ರ ಶೇಖರ್ ಮಾತನಾಡಿ ಕೃಷ್ಣ ರವರು ನಾಡು ಕಂಡ ಅಪ್ರತಿಮ ರಾಜಕಾರಣಿಗಳಲ್ಲೊಬ್ಬರು.

ಐ. ಟಿ. ಬಿ. ಟಿ. ಕ್ಷೇತ್ರದಲ್ಲಿ ಬೆಂಗಳೂರು ಇಡೀ ವಿಶ್ವದಲ್ಲಿ ಹೆಗ್ಗಳಿಕೆಗೆ ಕಾರಣವಾಗಲು ಕೃಷ್ಣರವರ ಪಾತ್ರ ಬಹು ಮುಖ್ಯವಾದುದು. ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ತೆಗೆದುಕೊಂಡ ದೂರ ದರ್ಶಿತ್ವ ಯೋಜನೆಗಳು ಪ್ರಸ್ತುತ ಮಹತ್ವವನ್ನು ಪಡೆದುಕೊಂಡಿದೆ. ಅದರಲ್ಲೂ ಬಹು ಮುಖ್ಯವಾಗಿ ಜಾಲಪ್ಪನವರ ಮಹತ್ವದ ಯೋಜನೆಯಾದ ಜಕ್ಕಲ ಮಡುಗು ಯೋಜನೆಗೆ ಮಂಜೂರಾತಿ ನೀಡಿ ಶಂಕುಸ್ಥಾಪನೆ ನೆರವೇರಿಸಿದ್ದು, ಇಂದು ದೊಡ್ಡಬಳ್ಳಾಪುರ ನಗರದ ಕುಡಿಯುವ ನೀರಿನ ಕೊರತೆಯನ್ನು ನೀಗಿಸಿದೆ. ಎಂದು ಚಂದ್ರು ಹೇಳಿದರು.

       ಕಾರ್ಯಕ್ರಮದಲ್ಲಿ ಕರವೇ ಕನ್ನಡಿಗರ ಬಣದ ಪ್ರದಾನ ಕಾರ್ಯದರ್ಶಿ ಆರ್. ರಮೇಶ್, ಸಂಘಟನಾ ಕಾರ್ಯದರ್ಶಿ ಅರವಿಂದ್, ಪ್ರೊ, ರವಿಕಿರಣ್, ಅಂಬರೀಷ್, ಶಿವಣ್ಣ, ವಿನಯ್ ಕುಮಾರ್, ನರೇಂದ್ರ ಹಾಜರಿದ್ದರು.

 

 

 

- Advertisement -  - Advertisement - 
Share This Article
error: Content is protected !!
";