ಚಂದ್ರವಳ್ಳಿ ನ್ಯೂಸ್, ನಾಗಮಂಗಲ:
ಗಲಭೆ ಪೀಡಿತ ಮಂಡ್ಯ ಜಿಲ್ಲೆಯ ನಾಗಮಂಗಲಕ್ಕೆ ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿ ಗಲಭೆ ನಡೆದಿದ್ದ ಸ್ಥಳದಲ್ಲಿ ಪರಿಶೀಲನೆ ಮಾಡಿದರು.
ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ಅನ್ಯಕೋಮಿನವರು ಮೆರವಣಿಗೆ ಮೇಲೆ ಚಪ್ಪಲಿ ಮತ್ತು ಕಲ್ಲುತೂರಿದ್ದರಿಂದಾಗಿ ಕೋಮುಗಲಭೆ ನಡೆದಿದ್ದರ ಪರಿಣಾಮ ಹಲವು ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ಹಾಕಿದ್ದರು. ಬೆಂಕಿಯಿಂದಾಗಿ ಹಲವು ಅಂಗಡಿಗಳು ಸಟ್ಟುಹೋಗಿದ್ದು ಆ ಅಂಗಡಿಗಳ ಬಳಿ ಕುಮಾರಸ್ವಾಮಿ ಪರಿಶೀಲನೆ ಮಾಡಿದರು.
ಮಂಡ್ಯ ಸಂಸದ ಹಾಗೂ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಜೊತೆಗೆ ನಷ್ಟಗೊಳಗಾದ ವ್ಯಾಪಾರಿಗಳಿಗೆ ಎಚ್‌ಡಿಕೆ ಸಾಂತ್ವನ ಹೇಳಿ, ವೈಯುಕ್ತಿಕವಾಗಿ ಅವರ ನೆರವಿಗೆ ಬರುವ ಕೆಲಸ ಮಾಡಿದರು. ಇನ್ನು ಹಣ್ಣಿನ ವ್ಯಾಪಾರಿ ಕುಳ್ಳ ಮಹಮ್ಮದ್‌ಮಾಝ್ ಅಂಗಡಿಗೂ ಭೇಟಿ ನೀಡಿದ ಎಚ್‌ಡಿಕೆ ಹಾನಿಗೊಳಗಾದ ನಷ್ಟವನ್ನ ವೀಕ್ಷಿಸಿದ್ದರು.
ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕುಮಾರಸ್ವಾಮಿ ಮತಗಳಿಕೆಗಾಗಿ ಯಾವುದೇ ಒಂದು ಸಮಾಜವನ್ನ ಓಲೈಕೆ ಮಾಡುವ ರಾಜಕಾರಣ ಮಾಡಬಾರದು, ಗಣೇಶ ವಿಸರ್ಜನೆಗೆ ಪಿಎಸ್ಐ ರವಿಕುಮಾರ್ ಬಳಿ ಅನುಮತಿ ಪಡೆದುಕೊಂಡಿದ್ದಾರೆ. ಈ ಬಗ್ಗೆ ಮೊದಲೇ ಪೊಲೀಸ್ ಇಲಾಖೆಗೆ ಮಾಹಿತಿ ಕೊಡಲಾಗಿದೆ. ಕಳೆದ ವರ್ಷ ಕೂಡ ಇಂತ ಘಟನೆ ನಡೆದಿದೆ ಅಂತ ಮಾಧ್ಯಮಗಳು, ಪೊಲೀಸರು ಹೇಳಿದ್ದಾರೆ.
ಕೇವಲ ನಾಗಮಂಗಲದಲ್ಲಿ ಅಲ್ಲ ರಾಜ್ಯ ಎಲ್ಲ ಕಡೆ ಡಿಜೆ ಹಾಕಿಕೊಂಡು ಹಾಡು ಹಾಕಿಕೊಂಡು ಮೆರಣಿಗೆ ನಡೆಯುವುದು, ಘೋಷಣೆ ಕೂಗುವುದು ನಡೆದುಕೊಂಡು ಬಂದಿದೆ. ಈ ರೀತಿ ಘೋಷಣೆಗಳು ಘರ್ಷಣೆಗೆ ಎಡೆಮಾಡಿಕೊಡ್ತವೆ. ಕೆಲ ಪಕ್ಷಗಳು ಒಂದೊಂದು ಸಮಾಜ ಓಲೈಕೆ ಮಾಡಿಕೊಳ್ಳೊದು ರಾಜ್ಯದಲ್ಲಿ ಕಾಣುತ್ತಿದೆ. ಕೈ ನಾಯಕರು ಒಂದು ಸಮಾಜವನ್ನ ಓಲೈಕೆ ಮಾಡುವ ರಾಜಕಾರಣ ಮಾಡಬಾರದು. ಈ ರೀತಿ ಓಲೈಕೆ ರಾಜಕಾರಣ ನನ್ನ ಜೀವನದಲ್ಲಿ ಎಂದು ಮಾಡಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ನಾಯಕರು ಈ ಪ್ರಕರಣದಲ್ಲಿ ರಾಜಕೀಯ ಬೇಡ ಎಂದಿದ್ದಾರೆ ಇದಕ್ಕೆ ನನ್ನ ಸ್ವಾಗತ ಇದೆ, ಆದರೆ ಕಾಂಗ್ರೆಸ್ ನಾಯಕರು ಏನ್ ಮಾಡುತ್ತಿದ್ದಾರೆ? ಅವರ ನಡುವಳಿಕೆ ಹೇಗಿದೆ? ಈ ಭಾಗದ ಜನರ ಬದುಕಿನಲ್ಲಿ ರಾಜಕೀಯ ಸಂಘಟನೆಗಾಗಿ ಬದುಕನ್ನ ಚಿದ್ರ ಮಾಡಬೇಡಿ. ಗೃಹ ಸಚಿವರು ಇದನ್ನ ಸಣ್ಣ ವಿಚಾರ ಅಂತಾರೆ, ಪರಮೇಶ್ವರ್ ಅವರೆ ಈ ರೀತಿ ಹೇಳಿಕೆ ಕೊಡುವ ಮೂಲಕ ನೀವು ಯಾವ ಸಂದೇಶ ನೀಡುತ್ತಿದ್ದೀರಿ? ಇಂತ ಸೂಕ್ಷ್ಮ ಮೆರವಣಿಗೆ ಇದ್ದಾಗ ತಕ್ಷಣ ಕ್ರಮ ಕೈಗೊಂಡಿದ್ದರೆ ಈ ಘಟನೆ ನಡೆಯುತ್ತಿತ್ತಾ? ಸ್ಥಳ ವೀಕ್ಷಣೆ ವೇಳೆ ವ್ಯವಸ್ಥಿತ ಪ್ಲ್ಯಾನ್ ಇರೋದು ಗೊತ್ತಾಗುತ್ತಿದೆ. ಇಲ್ಲಿದ್ದ ರಿಸರ್ವ್ ಪೊಲೀಸರನ್ನ ಬೇರೆಡೆಗೆ ಕಳಿಸುತ್ತಾರೆ. ಇದನ್ನ ಗೃಹಚಿವರು ಅಥವಾ ಮತ್ಯಾರು ಹೇಳಿದ್ದರು. ಪೆಟ್ರೋಲ್ ಬಾಂಬ್, ತಲವಾರ್ ಹಿಡಿದು ಓಡಾಡೋದು ಮಾಧ್ಯಮದವರಿಗೆ ಗೊತ್ತಾದ ಕೂಡಲೇ ಬರ್ತಾರೆ ಆದ್ರೆ ಸರ್ಕಾರ ಏನು ಮಾಡುತ್ತಿತ್ತು. ಸ್ಥಳೀಯ ಅಧಿಕಾರಿಗಳು ಯಾವ ರೀತಿ ಕೆಲಸ ಮಾಡುತ್ತಿದ್ದಾರೆ ಅಂತ ಗೊತ್ತಾಗುತ್ತಿದೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.
ಘಟನೆ ಜಾಗದಲ್ಲಿ ಇನ್ಸ್ಪೆಕ್ಟರ್, ಡಿವೈಎಸ್ಪಿ ಯಾರು ಇರಲಿಲ್ಲ. ರಾತ್ರಿ ಒಂದು ಗಂಟೆಯಲ್ಲಿ ರವಿ ಅನ್ನುವವನು ಪೊಲೀಸರಿಗೆ ದೂರು ನೀಡಿದ್ದಾನೆ. ಆಸ್ಪತ್ರೆಯಲ್ಲಿ ರವಿ ಅಷ್ಟು ಆರೋಪಿಗಳ ಹೆಸರು ಕೊಟ್ಟಿದ್ದಾನೆ ಅದು ಹೇಗೆ ಸಾಧ್ಯ ಎಂದು FIR ಬಗ್ಗೆ ಅನುಮಾನ ವ್ಯಕ್ತಪಡಿಸಿದ ಕುಮಾರಸ್ವಾಮಿ ಅವರು, 1990 ರಲ್ಲಿ ವೀರೇಂದ್ರ ಪಾಟೀಲ್ ಕೆಳಗಿಳಿಸಲು ರಾಮನಗರದಲ್ಲಿ ಗಲಭೆ ಸೃಷ್ಠಿಸಿ ರಾಜೀನಾಮೆ ಕೊಡುವಂತೆ ಮಾಡಿದ್ದರು. ಅವತ್ತು ನಡೆದಿದ್ದು ಕೋಮು ಗಲಭೆ ಅಲ್ಲ, ಕಾಂಗ್ರೆಸ್ ನ ಪ್ರಯೋಜಿತ ಕಾರ್ಯಕ್ರಮ.ಇತ್ತೀಚಿಗೆ ಕಾಂಗ್ರೆಸ್ ಓಲೈಕೆ ರಾಜಕಾರಣ, ಈ ಘಟನೆಯನ್ನ ನೋಡಿದ್ರೆ ಘಟನೆಗೆ ಕಾಂಗ್ರೆಸ್ ಸಂಪೂರ್ಣ ಕಾರಣ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಆರೋಪಿಸಿದರು.
ಗಣಪತಿ ಮೆರವಣಿಗೆ ವೇಳೆ ಏಕಾಏಕಿ ಅಷ್ಟೊಂದು ಕಲ್ಲು ಮತ್ತು ಪೆಟ್ರೋಲ್ ಅಷ್ಟು ಬೇಗ ಹೇಗೆ ಸಿಕ್ತು? ಘಟನೆಯಲ್ಲಿ ಎರಡು ಕೋಮಿನವರ ಅಂಗಡಿಗಳು ನಾಶವಾಗಿವೆ. ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಕ್ಕ ಸಿಕ್ಕವರನ್ನು ಅರೆಸ್ಟ್ ಮಾಡಿ ಈಗ ಇನ್ಸ್ ಪೆಕ್ಟರ್ ಅವರ ಅಮಾನತು ಮಾಡಿದ್ದಾರೆ. FIR ಅಲ್ಲಿ ದೊಣ್ಣೆ ಪೆಟ್ರೋಲ್ ಬಾಂಬ್ ಲಾಂಗ್ ಬಗ್ಗೆ ಉಲ್ಲೇಖ ಮಾಡಿದ್ದಾರೆ, ಈ ಸರ್ಕಾರ ಬಂದ ನಂತರ ಇಲಾಖೆ ಅಧಿಕಾರಿಗಳನ್ನು ಕೆಲ್ಸ ಮಾಡಲು ಬಿಟ್ಟಿಲ್ಲ, ಕಷ್ಟ ಪಟ್ಟು ಹಣ್ಣಿನ ವ್ಯಾಪಾರ ಮಾಡುವ ಜನರ ಬದುಕನ್ನು ನಾಶ ಮಾಡಿದ್ದಾರೆ ಎಂದು ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದದರು.
ನಾನು ಯಾರ ಮೇಲೆಯೂ ಆರೋಪ ಮಾಡಲ್ಲ. ಇಲ್ಲಿ ಆಗಿರೋದು ಪೊಲೀಸ್ ವೈಫಲ್ಯ ಅಷ್ಟೇ, ಅಧಿಕಾರಿಗಳು ಕೆಲಸ ಮಾಡಲು ಕಾಂಗ್ರೆಸ್ ಬಿಟ್ಟಿಲ್ಲ. ಪೊಲೀಸರನ್ನೆ ಕೊಲೆ ಮಾಡಲು ಮುನ್ನೆಚ್ಚರಿಕೆ ವಹಿಸಿದ್ದರು ಅಂತ ಎಫ್ಐಆರ್ ನಲ್ಲಿ ಉಲ್ಲೇಖ ಮಾಡಲಾಗಿದೆ. ಪೊಲೀಸ್ ಠಾಣೆ ಎದುರು ಇರೋ ಅಂಗಡಿಯನ್ನೆ ಸುಟ್ಟಿದ್ದಾರೆ. ಸಿದ್ದರಾಮಯ್ಯ, ಶಿವಕುಮಾರ್ ಟೀಮ್ ಅದು ಅಂತ ನಾನು ಮೊದಲೇ ಹೇಳಿದ್ದೀನಿ. ತಲವಾರ್ ಹಿಡಿದು ಓಡಾಡುತ್ತಾರೆ ಅಂದ್ರೆ ಎಷ್ಟು ಧೈರ್ಯ ಇರಬೇಕು. ಇದಕ್ಕೆನಾ ನಿಮಗೆ 136 ಸೀಟ್ ಕೊಟ್ಟಿದ್ದು ಎಂದು ಕಾಂಗ್ರೆಸ್ ನಾಯಕರಿಗೆ ತರಾಟೆ ತೆಗೆದುಕೊಂಡದರು.
ಇದೇ ವೇಳೆ ಸಣ್ಣ ಪುಟ್ಟ ವ್ಯಾಪಾರ ಮಾಡುತ್ತಿದ್ದವರಿಗೆ ಐದು ಸಾವಿರ ರೂಪಾಯಿ, ಹೆಚ್ಚಿನ ಪ್ರಮಾಣದ ನಷ್ಟ ಅನುಭವಿಸಿದವರಿಗೆ ಎರಡು ಲಕ್ಷ ವರೆಗೂ ಕುಮಾರಸ್ವಾಮಿ ಅವರು ವೈಯಕ್ತಿಕವಾಗಿ ದನ ಸಾಹಯ ಮಾಡಿದರು.