ವಿಶ್ವಕಪ್‌ ಖೋಖೋ ಪಂದ್ಯದಲ್ಲಿ ಗೆಲುವು ಸಾಧಿಸಿದ ರಾಜ್ಯದ ಕ್ರೀಡಾಪಟುಗಳಿಗೆ ಅಭಿನಂದಿಸಿದ ಕುಮಾರಸ್ವಾಮಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭಾರತದ ಪುರುಷರು ಮತ್ತು ಮಹಿಳೆಯರ ಖೋಖೋ ವಿಶ್ವಕಪ್‌ತಂಡದಲ್ಲಿ ಅಮೋಘ ಆಟವನ್ನಾಡಿ ಭಾರತವನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಡಿ.ಮಲ್ಲೀಗೆರೆ ಗ್ರಾಮದ ಎಂ.ಕೆ.ಗೌತಮ್ ಹಾಗೂ

ಟಿ.ನರಸೀಪುರ ತಾಲೂಕಿನ ಕುರುಬೂರು ಗ್ರಾಮದ ಚೈತ್ರಾ ಅವರಿಗೆ ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

- Advertisement - 

ನಮ್ಮ ದೇಶೀಯ ಕ್ರೀಡೆ ಖೋಖೋದಲ್ಲಿ ಭಾರತ ವಿಶ್ವ ಚಾಂಪಿಯನ್ ಆಗಿರುವುದಕ್ಕೆ ಇವರ ಜತೆ ತಂಡಸ್ಫೂರ್ತಿಯಿಂದ ಆಟವಾಡಿದ ಎಲ್ಲಾ ಆಟಗಾರರಿಗೂ ಶುಭಾಶಯಗಳನ್ನು ಅವರು ತಿಳಿಸಿದ್ದಾರೆ.

ಕನ್ನಡ ನೆಲದ ಗ್ರಾಮೀಣ ಮಕ್ಕಳಿಬ್ಬರೂ ಇಂದು ಭಾರತಾಂಬೆಯ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ್ದಾರೆ. ಮಾತ್ರವಲ್ಲದೆ, ಕನ್ನಡಮ್ಮನ ಕೀರ್ತಿ ಕಿರೀಟಕ್ಕೆ ಮತ್ತಷ್ಟು ಗರಿಗಳನ್ನು ಪೇರಿಸಿ ನಮ್ಮ ಸಂತಸವನ್ನು ಇಮ್ಮಡಿಗೊಳಿಸಿದ್ದಾರೆ.

- Advertisement - 

ಇಬ್ಬರಿಗೂ ಶುಭವಾಗಲಿ, ಭವಿಷ್ಯದಲ್ಲಿ ಇಂತಹ ಅನೇಕ ಉನ್ನತ ಸಾಧನೆಗಳನ್ನು ಮಾಡಲಿ ಎಂದು ಹಾರೈಸುತ್ತೇನೆ ಹಾಗೂ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಮಕ್ಕಳಿಗೆ ಇವರ ಸಾಧನೆ ಸದಾ ಪ್ರೇರಣೆಯಾಗಲಿ ಎಂದು ಕುಮಾರಸ್ವಾಮಿ ಆಶಿಸಿದ್ದಾರೆ.

 

 

 

Share This Article
error: Content is protected !!
";