ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೇಂದ್ರ ಸರಕಾರದ ಯುವ ಸಬಲೀಕರಣ ಸಚಿವಾಲಯ ನೀಡುವ ಪ್ರತಿಷ್ಠಿತ ‘ಮೈ ಭಾರತ್ ರಾಷ್ಟ್ರೀಯ ಸೇವಾ ಯೋಜನೆ‘ ಪ್ರಶಸ್ತಿಗೆ (My Bharat NSS Award) ಪಾತ್ರರಾಗಿರುವ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ತೆಲಗಿ ಗ್ರಾಮದ ಸಂಜಯಕುಮಾರ ಬಿರಾದಾರ ಅವರನ್ನು
ನವದೆಹಲಿಯ ಸಚಿವಾಲಯದ ಕಚೇರಿಯಲ್ಲಿ ಗೌರವಿಸಲಾಯಿತು ಎಂದು ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.
ಈ ಸಂದರ್ಭದಲ್ಲಿ ಅವರ ಪೋಷಕರಾದ ಯಂಕನಗೌಡ, ಶ್ರೀಮತಿ ಸುವರ್ಣ ಅವರನ್ನು ಭೇಟಿ ಮಾಡಿದ್ದು ನನ್ನ ಸೌಭಾಗ್ಯ. ಭವಿಷ್ಯದಲ್ಲಿ ಸಂಜೀವ ಅವರು ಇನ್ನಷ್ಟು ಎತ್ತರದ ಸಾಧನೆಗಳನ್ನು ಮಾಡಲಿ ಎಂದು ಕುಮಾರಸ್ವಾಮಿ ಆರೈಸಿದ್ದಾರೆ.

