ಜಗತ್ತಿನ 4ನೇ ಬೃಹತ್ ಆರ್ಥಿಕ ಶಕ್ತಿಯನ್ನಾಗಿ ಭಾರತವನ್ನು ರೂಪಿಸಿದ ಕೀರ್ತಿ ಮೋದಿಗೆ ಸಲ್ಲುತ್ತದೆ-ಕುಮಾರಸ್ವಾಮಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರಧಾನಿ ನರೇಂದ್ರ ಮೋದಿ ಅವರು ಸತತ
3ನೇ ಅವಧಿಗೆ ಭಾರತ ಗಣರಾಜ್ಯದ ಪ್ರಧಾನಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿ ಜೂ.9ಕ್ಕೆ ಒಂದು ವರ್ಷ. ಮಾನ್ಯ ಪ್ರಧಾನಿಗಳಿಗೆ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಹೆಚ್.ಡಿ ಕುಮಾರಸ್ವಾಮಿ ಹೃದಯಪೂರ್ವಕವಾಗಿ ಶುಭ ಹಾರೈಸಿದ್ದಾರೆ.

- Advertisement - 

ನೈಜ ಅಭಿವೃದ್ಧಿ, ರಾಷ್ಟ್ರ ಸುರಕ್ಷತೆ ಜೊತೆಗೆ ಭಾರತವನ್ನು ಜಗತ್ತಿನ 4ನೇ ಬೃಹತ್ ಆರ್ಥಿಕ ಶಕ್ತಿಯನ್ನಾಗಿ ರೂಪಿಸಿದ ಕೀರ್ತಿ ಮೋದಿ ಅವರಿಗೆ ಸಲ್ಲುತ್ತದೆ. ಮುಂದಿನ 3 ವರ್ಷಗಳಲ್ಲಿ ಭಾರತವು ಜಗತ್ತಿನ 3ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯಲಿದೆ ಎಂಬ ಖಚಿತ ವಿಶ್ವಾಸ ನನಗಿದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

- Advertisement - 

ಅಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಕ್ರಮಗಳ ಸಮತೋಲನ ಕಾಯ್ದುಕೊಂಡು ಹೊಸ ಶಖೆಗೆ ನಾಂದಿ ಹಾಡಿದ ಪ್ರಧಾನಿಗಳನ್ನು ಅಭಿನಂದಿಸುತ್ತೇನೆ.

11 ವರ್ಷಗಳಿಂದ ಅವಿರತವಾಗಿ ರಾಷ್ಟ್ರಸೇವೆ ಮಾಡುತ್ತಿರುವ ಮೋದಿರವರ ನೇತೃತ್ವದಲ್ಲಿ ಭಾರತವು ವಿಕಸಿತ ಭಾರತವಾಗಿ ಹೊರಹೊಮ್ಮಲಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

- Advertisement - 

 

Share This Article
error: Content is protected !!
";