ರಾಜ್ಯಕ್ಕೆ ಕೈಗಾರಿಕೆ ತರಲು ಕಾಂಗ್ರೆಸ್ ಸರ್ಕಾರ ಸಹಕಾರ ನೀಡುತ್ತಿಲ್ಲ-ಕುಮಾರಸ್ವಾಮಿ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಮಂಡ್ಯ :
ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಗೈಡೆನ್ಸ್​ ವ್ಯಾಲ್ಯೂ ಜಾಸ್ತಿ ಮಾಡಿಕೊಂಡರು. ಬಿ ಖಾತಾದಿಂದ ಎ ಖಾತಕ್ಕೆ 5 ಲಕ್ಷದಿಂದ 10 ಲಕ್ಷ ಎಲ್ಲಿ ಕಟ್ಟುತ್ತಾರೋ ಗೊತ್ತಿಲ್ಲ. ಅದರಿಂದ 10-15 ಸಾವಿರ ಕೋಟಿ ವಸೂಲಿ ಮಾಡುತ್ತಾರೋ ಅಥವಾ ಇದು ಜನತೆಗೆ ಉಡುಗೊರೆ ಕೊಡುತ್ತಾರೋ
, ಇಲ್ಲವೇ, ಬಿ ಖಾತೆಯವರಿಂದ ದೀಪಾವಳಿ ಉಡುಗೊರೆಯನ್ನು ಪಡೆಯುತ್ತಾರೋ ಗೊತ್ತಿಲ್ಲ ಎಂದು ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದಾರೆ. ಮಂಡ್ಯದಲ್ಲಿ ನಿರ್ಮಾಣವಾಗಿರುವ ಹೈಟೆಕ್ ಆಟೋ ನಿಲ್ದಾಣ ಹಾಗೂ ನೂತನ ಮಾರುಕಟ್ಟೆ ಉದ್ಘಾಟಿಸಿ ಅವರು ಮಾತನಾಡಿದರು.

ಕಾಂಗ್ರೆಸ್ ಸರ್ಕಾರ ಜನರ ಮೇಲೆ ತೆರಿಗೆ ವಿಧಿಸಿ 6ನೇ ಗ್ಯಾರಂಟಿ ಎನ್ನುತ್ತಿದ್ದಾರೆ. ದುಡ್ಡು ಸಂಗ್ರಹ ಮಾಡಲು ಮಾತ್ರ ಚಿಂತನೆ ಮಾಡ್ತಾರೆ. ನಾನು ಇಂಡಸ್ಟ್ರಿ ತರಲು ಆಗುತ್ತಾ? ಮಂಡ್ಯದಲ್ಲಿ ಲ್ಯಾಂಡ್ ಇಲ್ಲ, ರಾಜ್ಯ ಸರ್ಕಾರ ಲ್ಯಾಂಡ್ ಕೊಡಬೇಕು ಎಂದು ಕುಮಾರ ಸ್ವಾಮಿ ಹೇಳಿದರು.

- Advertisement - 

ಈಗಾಗಲೇ ಹಲವು ಯೋಜನೆಗಳಿಗೆ ಚಾಲನೆ ಕೊಟ್ಟಿದ್ದೇನೆ. ಈ ವರ್ಷ ಶಾಲಾ ಕಟ್ಟಡ, ಬಸ್ ನಿಲ್ದಾಣ, ಸಿಎಸ್​ಆರ್ ಫಂಡ್ ಮೂಲಕ ಅನುಷ್ಠಾನ ಮಾಡಲಾಗುವುದು. ಇತಿಹಾಸ ಹೊಂದಿರುವ ಮೈಶುಗರ್ ಶಾಲೆಗೆ ಖಾಸಗೀಕರಣ ಬೇಡವೆಂದು ನೆರವು ಕೊಡಲು ನಾನು ಬದ್ದವಾಗಿದ್ದೇನೆ. ಜಿಲ್ಲೆಯಲ್ಲಿ 10 ಕೋಟಿ ಅನುದಾನ ಆದಷ್ಟು ಬೇಗ ಚಾಲನೆ ಸಿಗುತ್ತೆ. ನನಗೆ ಸಿಕ್ಕ ಅವಕಾಶ ಕೆಲವು ಇಲಾಖೆಯಲ್ಲಿ ಅರ್ಥಿಕ ನೆರವು ತರಲು ಅವಕಾಶ ಇದೆ. ನಿರುದ್ಯೋಗ ಸಮಸ್ಯೆ ಪರಿಹರಿಸಲು ಜನರು ಆಸೆ ಇಟ್ಟುಕೊಂಡಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದರು.

ಭದ್ರಾವತಿ ಕಾರ್ಖಾನೆ ನಿಲ್ಲಿಸಿದ್ದಾರೆ, HMT ಕಾರ್ಖಾನೆಯ ಪುನರುಜ್ಜೀವನಕ್ಕೆ ಡಿಪಿಆರ್ ತಯಾರು ಮಾಡಲಾಗಿದೆ. ಆಂದ್ರ ಮತ್ತು ನಮ್ಮ ನಡುವೆ ಪೈಪೋಟಿ ಇದೆ. ಕಾರ್ಖಾನೆ ತರಲು ರಾಜ್ಯ ಸರ್ಕಾರ ಸಹಕಾರ ಕೊಡಬೇಕು. ದೇಶದಲ್ಲಿ 10 ಸಾವಿರ, ಬೆಂಗಳೂರಿನಲ್ಲಿ ನಾಲ್ಕು ಸಾವಿರ ಎಲೆಕ್ಟ್ರಿಕ್ ಬಸ್ ವ್ಯವಸ್ಥೆ ಮಾಡಲು ಮುಂದಾಗಿದ್ದು, ಎಲ್ಲಾ ರೀತಿಯ ಸಹಕಾರ ಕೊಡಲು ತಯಾರಿದ್ದೇನೆ. ರೈತರು ಸಂಕಷ್ಟದಲ್ಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಬಳಿ ಚರ್ಚೆ ಮಾಡಿ ಹೆಚ್ಚಿನ ನೆರವಿಗೆ ಮನವಿ ಮಾಡಿದ್ದೇನೆ ಎಂದು ಕುಮಾರಸ್ವಾಮಿ ತಿಳಿಸಿದರು.

- Advertisement - 

ದ್ರೋಹ ಮಾಡಲ್ಲ: ಇವತ್ತಿನವರೆಗೆ ರಾಜ್ಯ ಸರ್ಕಾರ ಪರಿಹಾರ ಕೊಟ್ಟಿದನ್ನ ನೋಡಿಲ್ಲ. ಅಭಿವೃದ್ಧಿ ಮಾಡಲು ನಾನು ಬದ್ದ. ರಾಜ್ಯ ಸರ್ಕಾರದ ಹಲವು ಜವಾಬ್ದಾರಿ ಇದೆ. ಮಂಡ್ಯ ಜನರು ನನ್ನ ಮೇಲೆ ವಿಶ್ವಾಸ ಇಟ್ಟು ಆಶೀರ್ವಾದ ಮಾಡಿದ್ದಾರೆ. ಅವರಿಗೆ ನಾನು ದ್ರೋಹ ಮಾಡಲ್ಲ. ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ. ಮಂಡ್ಯ ಜನರಿಗೆ ಅಗೌರವ ತರುವುದು ಬಿಟ್ಟು ಋಣ ತೀರಿಸುತ್ತೇನೆ.

ಕೈಗಾರಿಕಾ ಉದ್ಯೋಗ ಆಕರ್ಷಣೆ ಮಾಡಲು ಒತ್ತು ನೀಡುತ್ತೇನೆ. ರಾಜ್ಯದ ಬಗ್ಗೆ ದೇಶದಲ್ಲಿ ಇಲ್ಲಿಯ ಸರ್ಕಾರದ ನಡವಳಿಕೆ ಬಗ್ಗೆ ಪ್ರತಿಕ್ರಿಯೆ ಬರ್ತಿರುವುದನ್ನು ನೀವು ನೋಡ್ತಿದ್ದೀರಿ. ಎರಡು ಬಾರಿ ಸಿಎಂ ಆದೆ, ಒಂದು ಬಾರಿ ಬಿಜೆಪಿ ಹಾಗೂ ಕಾಂಗ್ರೆಸ್ ಜೊತೆ ಇದ್ದೆ‌. ಆ ಸಂದರ್ಭದಲ್ಲಿ ಯಾವುದೇ ತೊಂದರೆ ಆಗಿರಲಿಲ್ಲ. ಎರಡನೇ ಬಾರಿ ಕಾಂಗ್ರೆಸ್ ಜೊತೆ ಸಿಎಂ ಆದೆ‌. ಬಿಜೆಪಿ ಕೇಂದ್ರದಲ್ಲಿತ್ತು, ಅವಾಗ ತೊಂದರೆ ಆಯ್ತು ಎಂದರು.

ಇದೇ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ನಗರದ ಸಂಜಯ ವೃತ್ತದಲ್ಲಿ ಸಂಸದರ ನಿಧಿಯಿಂದ ಸಿಎಸ್​​ಆರ್ ಅನುದಾನದಲ್ಲಿ ಹೊಸದಾಗಿ ನಿರ್ಮಾಣವಾದ ಹೈಟೆಕ್ ಆಟೋ ನಿಲ್ದಾಣ ಉದ್ಘಾಟಿಸಿದರು. ಮಂಡ್ಯದ KSRTC ಬಸ್ ನಿಲ್ದಾಣದ ಬಳಿ ನಿರ್ಮಾಣವಾಗಿರುವ ಹೈಟೆಕ್ ಆಟೋ ನಿಲ್ದಾಣಕ್ಕೆ ಪೂಜೆ ಸಲ್ಲಿಸಿ ಟೇಪ್ ಕತ್ತರಿಸಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕ ವಿವೇಕಾನಂದ, ಮಾಜಿ ಸಚಿವ ಸಿ.ಎಸ್. ಪುಟ್ಟರಾಜು, ಮಾಜಿ ಶಾಸಕ ಕೆ. ಟಿ. ಶ್ರೀಕಂಟೇಗೌಡ. ನಗರಸಭಾ ಅಧ್ಯಕ್ಷ ಎಂ. ವಿ. ಪ್ರಕಾಶ್, ಜೆಡಿಎಸ್ ಮುಖಂಡ ಬಿ. ಆರ್. ರಾಮಚಂದ್ರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

 

Share This Article
error: Content is protected !!
";