ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಿಡದಿ ಟೌನ್ ಶಿಪ್ ಹೆಚ್.ಡಿ.ಕುಮಾರಸ್ವಾಮಿ ಅವರ ಕಾಲದಲ್ಲಿ ಆಗಿರುವ ತೀರ್ಮಾನ ಎಂದು ರೈತರ ಸಾವಿರಾರು ಎಕರೆ ಜಮೀನು ಲೂಟಿ ಮಾಡಲು ಹೊರಟಿರುವ ಡಿ.ಕೆ ಶಿವಕುಮಾರ ಮತ್ತು ಕರ್ನಾಟಕ ಕಾಂಗ್ರೆಸ್ ನಾಯಕರೇ,
2016ರಲ್ಲಿ ಅಂದಿನ ಸಿದ್ದರಾಮಯ್ಯ ಸರ್ಕಾರ, ಸಚಿವ ಸಂಪುಟ ಸಭೆಯಲ್ಲಿ ಬಿಡದಿ ಈಗಲ್ ಟನ್ ರೆಸಾರ್ಟ್ ಒತ್ತುವರಿ ಮಾಡಿದ್ದ ಪ್ರತೀ ಎಕರೆಗೆ 13 ಕೋಟಿ ರೂ. ದರ ನಿಗದಿ ಪಡಿಸಿದ್ದೀರಿ. ಈಗ 10 ವರ್ಷಗಳೇ ಕಳೆದಿವೆ.
ಟೌನ್‌ಶಿಪ್‌ಗಾಗಿ ಬಿಡದಿ ರೈತರನ್ನು ಒಕ್ಕಲೆಬ್ಬಿಸುತ್ತಿರುವ ಕಾಂಗ್ರೆಸ್‌ಸರ್ಕಾರ, ರೈತರಿಂದ ವಶಪಡಿಸಿಕೊಳ್ಳುವ ಪ್ರತಿ ಎಕರೆಗೆ ಈಗಲ್‌ಟನ್‌ರೆಸಾರ್ಟ್‌ಗೆ ನಿಗದಿ ಪಡಿಸಿದ್ದ ದರಕ್ಕಿಂತ ಎರಡು ಪಟ್ಟು ಹೆಚ್ಚು ಪರಿಹಾರ ನೀಡಲಿ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಆಗ್ರಹ ಮಾಡಿದ್ದಾರೆ.

