ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭಗವದ್ಗೀತೆ ಸಾರ್ವಕಾಲಿಕ, ಕಾಲಾತೀತ ದೀವಿಗೆ, ಅರಿವು. ಶಿಕ್ಷಣದ ಹಂತದಲ್ಲಿಯೇ ಮಕ್ಕಳಿಗೆ ಬೋಧಿಸಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.
ನನ್ನ ಮನವಿಗೆ ಕೇಂದ್ರ ಶಿಕ್ಷಣ ಸಚಿವರಾದ ಪ್ರಧಾನ್ ಅವರು ಸಕಾರಾತ್ಮಕವಾಗಿ ಸ್ಪಂದಿಸುತ್ತಾರೆ ಎನ್ನುವ ಅಚಲ ನಿರೀಕ್ಷೆ ಇದೆ.
ಭಗವದ್ಗೀತೆ ಮೂಲಕ ಮಕ್ಕಳಿಗೆ ಆದರ್ಶದ, ಸಂಸ್ಕಾರದ ಗುಣಗಳನ್ನು ಕಲಿಸಬೇಕಿದೆ. ವಿದ್ಯೆ ಎಂದರೆ ಮೌಲ್ಯಗಳನ್ನು ಬಿಟ್ಟು ಕಲಿಯುವುದಿಲ್ಲ ಎಂಬುದನ್ನು ಎಲ್ಲರೂ ಮನಗಾಣಬೇಕು. ಭಾರತೀಯತೆ ಎಂದರೆ ಮಹಾನ್ ಮೌಲ್ಯಗಳ ಮಹಾಕಣಜ ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

