ಆರ್​​ಎಸ್​ಎಸ್ ಬಗ್ಗೆ ಟೀಕೆ ಬಿಟ್ಟು ಸರ್ಕಾರ ನಡೆಸೋ‌ ಕಡೆ ಗಮನ ಕೊಡಿ-ಕುಮಾರಸ್ವಾಮಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಆರ್​​ಎಸ್​ಎಸ್ ಕುರಿತು ನಿತ್ಯ ಟೀಕೆ ಮಾಡುವುದನ್ನು ಬಿಟ್ಟು ಸರ್ಕಾರ ನಡೆಸೋ‌ ಕಡೆ ಗಮನ ಕೊಡಿ ಎಂದು ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಅವರು ಕಿವಿಮಾತು ಹೇಳಿದ್ದಾರೆ.

ಜೆಡಿಎಸ್​ ಪಕ್ಷದ ಕಚೇರಿ ಜೆ. ಪಿ. ಭವನದಲ್ಲಿ ಶನಿವಾರ ಮಾಧ್ಯದಮವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹಲವಾರು ಸಮಸ್ಯೆಗಳಿವೆ. ‌ಕಳೆದ‌ ಎಂಟು ಹತ್ತು ದಿನಗಳಿಂದ ಈ ಸರ್ಕಾರ ಆರ್​​ಎಸ್ಎಸ್ ಸಂಬಂಧ ವಿಷಯ ಡೈವರ್ಟ್ ಮಾಡಿಕೊಂಡು ಹೊರಟಿದೆ. ಇವತ್ತು ರಾಜ್ಯದಲ್ಲಿ ಮಳೆಯಿಂದ ಅನೇಕ‌ ಅನಾಹುತಗಳಾಗಿವೆ. ಅದರ ಬಗ್ಗೆ ಗಮನಹರಿಸಬೇಕಿತ್ತು ಎಂದು ಕುಮಾರಸ್ವಾಮಿ ತಾಕೀತು ಮಾಡಿದರು.

- Advertisement - 

ಬೆಂಗಳೂರಿನ ಗುಂಡಿಗಳನ್ನು ಮುಚ್ಚಬೇಕಿತ್ತು. ಈಗ ಅದಕ್ಕೆ ಮತ್ತೆ ಒಂದು ವಾರ ಗಡುವು ಕೊಟ್ಟಿದ್ದಾರೆ. ಜನ ಗುಂಡಿಗಳಲ್ಲಿ ಬಿದ್ದು ಸಾಯ್ತಿದ್ದಾರೆ. ಅದನ್ನು ಸರಿಪಡಿಸಿ, ಆರ್​​ಎಸ್​ಎಸ್ ಬಗ್ಗೆ ಏನ್ ಚರ್ಚೆ ಮಾಡ್ತೀರಿ. ಅದರಿಂದ ಏನು ಉಪಯೋಗ?. ಇದೆಲ್ಲ ಬಿಡಿ. ಕಳೆದ ಎರಡು ವರ್ಷಗಳಿಂದ ‌ಅಧಿಕಾರ ಹಸ್ತಾಂತರ ವಿಚಾರದಲ್ಲೇ‌ ಕಾಲ‌ ಕಳೆದಿದ್ದೀರಿ.

ಹಲವಾರು ಬದಲಾವಣೆಗಳು ಆಗಿವೆ. ಇದರ‌ ಜೊತೆಗೆ ಬುರುಡೆ ಕಥೆ ಅಂಥಾ ಹೇಳಿ, ಅದ್ಯಾರೋ ಕಂಪ್ಲೆಂಟ್ ಕೊಟ್ರು ಅಂತಾ ಮೂರು ತಿಂಗಳು ರಾಜ್ಯದಲ್ಲಿ ಬುರುಡೆ ಕಥೆ ಆಯ್ತು. ಇದರಿಂದ ಆಗಿದ್ದೇನು? ಸೊನ್ನೆ. ತಿಮರೋಡಿ‌ ಬಳಿ ಅದೆಂತದ್ದೋ ವೆಪನ್ ಇತ್ತು ಅಂಥಾ ಹೇಳಿದ್ರು. ಈಗ ಆತನ ಅರೆಸ್ಟ್​ಗೂ ಸ್ಟೇ‌ ಕೊಡಲಾಗಿದೆ. ಏನು ಸಾಧನೆ ಮಾಡಿದ್ರಿ ಎಂದು ಕುಮಾರಸ್ವಾಮಿ ಟೀಕಾಪ್ರಹಾರ ಮಾಡಿದರು.

- Advertisement - 

ವಿಧಾನ ಪರಿಷತ್ ಸದಸ್ಯ ಯತೀಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿ, ಈ ದೇಶದಲ್ಲಿ ಅಂಬೇಡ್ಕರ್ ಅವರು ರಚನೆ ಮಾಡಿರುವ ಸಂವಿಧಾನದಲ್ಲಿ ಯಾರು ಬೇಕಾದರೂ ಏನು ಬೇಕಾದರೂ ಆಗಬಹುದು. ಒಂದು ಹೆಸರನ್ನು ಹೇಳಿಕೊಂಡು ನಾನು ಮಾತನಾಡೋ ಅವಶ್ಯಕತೆ ಇಲ್ಲ.

ಯಾರು ಬೇಕಾದರೂ ಈ ಸಂವಿಧಾನದಲ್ಲಿ ಮುಖ್ಯಮಂತ್ರಿ ಆಗೋಕೆ ಅವಕಾಶ ಇದೆ. ಅದು ಅವರ ಪಕ್ಷಕ್ಕೆ ಸೇರಿದ್ದು. ಯಾರನ್ನು ಮಾಡಬೇಕು, ಯಾರನ್ನು ಬಿಡಬೇಕು ಅನ್ನೋದು ಅವರ ಪಕ್ಷಕ್ಕೆ ಬಿಟ್ಟಿದ್ದು, ನಾನ್ಯಾಕೆ‌ ಅದರ ಬಗ್ಗೆ ‌ಮಾತನಾಡಲಿ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಆರ್​ಎಸ್​ಎಸ್ ಅವರ ಕೆಲವು ವಿಷಯಗಳು, ಅವರ ನಡವಳಿಕೆ ಬಗ್ಗೆ ನಾನು ಟೀಕೆ ಮಾಡಿದ್ದೇನೆ. ಇಲ್ಲ ಅಂತ ಹೇಳಿಲ್ಲ. ಇವತ್ತು ರಾಜ್ಯದಲ್ಲಿ ಕಾಂಗ್ರೆಸ್​ಗೆ 136 ಸೀಟು ಕೊಟ್ಟಿದ್ದು ಜನರ ಸಮಸ್ಯೆ ಕೇಳುವುದಕ್ಕೆ. ಬೇರೆ ಎಲ್ಲೂ ಬೇಡ, ಕಲಬುರಗಿಯಲ್ಲಿ ಜನ ಇವತ್ತು ಬೀದಿಯಲ್ಲಿ ಇದ್ದಾರೆ. ಬೆಳೆ‌ ಬೆಳೆದ ರೈತರು ಸಂಕಷ್ಟದಲ್ಲಿದ್ದಾರೆ ಎಂದು ಕುಮಾರಸ್ವಾಮಿ ವಾಗ್ದಾಳಿ ಮಾಡಿದರು.

Share This Article
error: Content is protected !!
";