ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹಿರಿಯರು, ವಿಧಾನ ಪರಿಷತ್ ಮಾಜಿ ಸದಸ್ಯರು, ಪತ್ರಿಕೋದ್ಯಮದ ಮಹಾವೃಕ್ಷ, ನನ್ನ ಗುರು ಸಮಾನರೂ ಆಗಿರುವ ಪಿ.ರಾಮಯ್ಯ ಅವರ ನಿವಾಸಕ್ಕೆ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ತೆರಳಿ ಅವರ ಆರೋಗ್ಯ, ಕ್ಷೇಮ ವಿಚಾರಿಸಿದರು.
ಪ್ರಾಮಾಣಿಕ, ಮೌಲ್ಯಾಧಾರಿತ ಮಾಧ್ಯಮದ ಶ್ರೇಷ್ಠ ಕೊಂಡಿಯಾಗಿರುವ ಹಿಂದೂ ರಾಮಯ್ಯನವರು ಆರೋಗ್ಯವಾಗಿರಲಿ, ಶತಾಯುಷಿಯಾಗಿ ಸದಾ ಮಾರ್ಗದಶನ ನೀಡಲಿ ಹಾಗೂ ಯಾವಾಗಲೂ ಭಗವಂತನ ಕೃಪೆ ಅವರ ಮೇಲಿರಲಿ ಎಂದು ಕುಮಾರಸ್ವಾಮಿ ಅವರು ಹಾರೈಸಿದರು.