ರೂರ್ಕೆಲಾ ಉಕ್ಕು ಸ್ಥಾವರಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತೀಯ ಉಕ್ಕು ವಲಯವು ಹೆಚ್ಚಿನ ದಕ್ಷತೆ, ನಾವೀನ್ಯತೆಯೊಂದಿಗೆ ಜಾಗತಿಕ ಸ್ಪರ್ಧಾತ್ಮಕತೆಯತ್ತ ಮುನ್ನಡೆಯುತ್ತಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.

ಪ್ರಧಾನಿಗಳ ದೃಢವಾದ ಸಂಕಲ್ಪದ ಭಾಗವಾಗಿ ರೂರ್ಕೆಲಾ ಉಕ್ಕು ಸ್ಥಾವರಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.

- Advertisement - 

ಕಾರ್ಖಾನೆಯ ಪ್ರಭಾರಿ ನಿರ್ದೇಶಕ ಅಲೋಕ್ ವರ್ಮ ಅವರು ಅಲ್ಲಿನ ಕಾರ್ಯಾಚರಣೆಯ ಕಾರ್ಯಕ್ಷಮತೆ, ತಾಂತ್ರಿಕ ಸಾಮರ್ಥ್ಯ, ನಡೆಯುತ್ತಿರುವ ಆಧುನೀಕರಣ ಉಪಕ್ರಮಗಳು ಮತ್ತು ಮುಂಬರುವ ಕಾರ್ಯತಂತ್ರದ ಯೋಜನೆಗಳ ಬಗ್ಗೆ ವಿವರವಾಗಿ ವಿವರಿಸಿದರು ಎಂದು ಕುಮಾರಸ್ವಾಮಿ ತಿಳಿಸಿದರು.

ಭಾರತ ಸರ್ಕಾರದ ಉಕ್ಕು ಸಚಿವಾಲಯದ ಉನ್ನತ ಅಧಿಕಾರಿಗಳು, ಸೈಲ್ ಸ್ಟೀಲ್ ಉನ್ನತ ಅಧಿಕಾರಿಗಳು ಕುಮಾರಸ್ವಾಮಿ ಅವರ ಜೊತೆಯಲ್ಲಿ ಇದ್ದರು.

- Advertisement - 

 

Share This Article
error: Content is protected !!
";